ಎಲ್.ಐ.ಸಿ. ಶಾಖೆ 1ರ ಏಜೆಂಟ್ಸ್ ಅಸೋಷಿಯೇಷನ್ನಿನ 18ನೇ ವಾರ್ಷಿಕ ಮಹಾಸಭೆಯು ಎಲ್.ಐ.ಸಿ. ಏಜೆಂಟ್ಸ್ ಸಮುದಾಯ ಭವನದಲ್ಲಿ ಇಂದು ಬೆಳಿಗ್ಗೆ 10-30 ಗಂಟೆಗೆ ನಡೆಯಲಿದೆ. ಸಂಘದ ಅಧ್ಯಕ್ಷ ಎಸ್.ಜಿ.ಪಂಪಣ್ಣ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿ ಗಳಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ವಿಮಾ ನಿಗಮದ ಮುಖ್ಯ ಪ್ರಬಂಧಕ ಬಿ. ಶಿವಪ್ಪನಾಯ್ಕ ಹಾಗೂ ನಿಗಮದ ಜಗಳೂರು ಸಂಪರ್ಕ ಶಾಖೆ ವ್ಯವಸ್ಥಾಪಕ ಸೈಯದ್ ಜುಬೇರ್ ಅಹಮದ್ ಆಗ ಮಿಸುವರು ಎಂದು ಕಾರ್ಯದರ್ಶಿ ಡಿ.ಸಿ.ಶಿವಮೂರ್ತಿ ತಿಳಿಸಿದ್ದಾರೆ.
January 9, 2025