ದಾವಣಗೆರೆ, ಸೆ. 13- ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಮರ್ಕಜಿ ಮಸ್ಜಿದ್ ಎ ಮಹಮ್ಮದೀಯ ಮಸೀದಿಯಲ್ಲಿ ನಾಳೆ ದಿನಾಂಕ 14 ರ ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 7ರವರೆಗೆ ‘ನಮ್ಮೂರ ಮಸೀದಿ ನೋಡ ಬನ್ನಿ’ ಮಸೀದಿ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಸೀದಿ ಸದಸ್ಯರೂ, ಕನ್ನಡ ಶಿಕ್ಷಕರಾದ ಮಹಮ್ಮದ್ ಉಮರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮಸೀದಿಯಲ್ಲಿ ನಡೆಯುವ ಪ್ರಾರ್ಥನೆಗಳು, ಸಭಾ ವಿಧಾನ, ನಮಾಜ್ ಮಾಡುವ ವಿಧಿವಿಧಾನಗಳನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಸೀದಿ ಅಧ್ಯಕ್ಷ ಸೈಯದ್ ಅಹಮದ್, ಮೌಲ್ವಿ ಉಮರ್ ಫಾರೂಖ್ ಮೊಹಮ್ಮದಿ, ಶೇಖ್ ನೂರುಲ್ಲಾ, ಎಂ.ಎ. ಅತಾವುಲ್ಲಾ ಮತ್ತಿತರರು ಉಪಸ್ಥಿತರಿದ್ದರು.