ದಾವಣಗೆರೆ, ಸೆ.13- ಇದೇ ಪ್ರಥಮ ಬಾರಿಗೆ ದಾವಣಗೆರೆಯಲ್ಲಿ ಇನ್ಸೈಟ್ಸ್ ಸಂಸ್ಥೆಯಿಂದ ಐಎಎಸ್, ಕೆಎಎಸ್ ತರಬೇತಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ಸಂಸ್ಥೆಯ ಸ್ಥಾಪಕರೂ, ನಿರ್ದೇಶಕರೂ ಆದ ಜಿ.ಬಿ. ವಿನಯ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾಡಿದ್ದು ದಿನಾಂಕ 15ರ ಭಾನುವಾರ ತರಬೇತಿ ಕೇಂದ್ರವನ್ನು ಸರಳವಾಗಿ ಉದ್ಘಾಟಿಸಲಾಗುವುದು. 16ರಿಂದ ತರಗತಿಗಳು ಆರಂಭವಾಗಲಿವೆ ಎಂದರು. ದಿನಾಂಕ 30ರಿಂದ ಐಎಎಸ್ ತರಬೇತಿ ಆರಂಭವಾಗಲಿದೆ ಎಂದರು.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪ್ರತಿ ಕ್ಷೇತ್ರದ 10 ಬಡ ಮಕ್ಕಳಂತೆ ಒಟ್ಟು 80 ಮಕ್ಕಳಿಗೆ ಪ್ರತಿ ವರ್ಷ ಉಚಿತವಾಗಿ ಐಎಎಸ್ ತರಬೇತಿ ನೀಡಲಾಗುವುದು. ಕೆಎಎಸ್ ತರಬೇತಿಯನ್ನೂ ಬಡ ಹಾಗೂ ನಿರ್ಗತಿಕ ಮಕ್ಕಳಿಗೆ ರಿಯಾಯಿತಿಯಲ್ಲಿ ನೀಡಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಸ್. ಶರತ್ ಕುಮಾರ್ ಉಪಸ್ಥಿತರಿದ್ದರು.