ದಾವಣಗೆರೆ, ಸೆ. 13 – ಮಹಿಳೆಯೊಬ್ಬರು ಆಟೋ ದಲ್ಲಿ ಕಳೆದುಕೊಂಡಿದ್ದ ಆಭರಣಗಳನ್ನು ಪತ್ತೆ ಹಚ್ಚಿ ಮರಳಿ ಕೊಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹರಿಹರದ ಹಳ್ಳದಕೇರಿ ವಾಸಿ ನವೀನತಾಜ್ ಸೆ.10ರಂದು ಮಧ್ಯಾಹ್ನ ಭಾಷಾ ನಗರದ ಬಳಿ ಆಟೋ ಹತ್ತಿ, ಇಸ್ಲಾಂ ಪೇಟೆ ಮಸೀದಿ ಬಳಿ ಆಭರಣಗಳಿರುವ ವ್ಯಾನಿಟಿ ಬ್ಯಾಗ್ ಬಿಟ್ಟು ಆಟೋ ಇಳಿದಿದ್ದರು.
ತನಿಖೆ ನಡೆಸಿದ ಪೊಲೀಸರು, ಸಿಸಿ ಟಿವಿಗಳನ್ನು ಪರಿಶೀಲಿಸಿ ದಸ್ತಗಿರಿ ಎಂಬುವವರ ಆಟೋ ಪತ್ತೆ ಮಾಡಿ, ಚಾಲಕನನ್ನು ಠಾಣೆಗೆ ಕರೆಸಿದಾಗ ಅವರು ಪ್ರಾಮಾಣಿಕ ವಾಗಿ ಆಭರಣಗಳನ್ನು ಮರಳಿಸಿದ್ದಾರೆ.
ಈ ವೇಳೆ ಆಟೋ ಚಾಲಕನನ್ನು ಸನ್ಮಾನಿಸಲಾಗಿದೆ. ಆಟೋ ಪತ್ತೆ ಕಾರ್ಯ ದಲ್ಲಿ ಬಸವನಗರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಗುರುಬಸವರಾಜ್ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ ಫಕೃದ್ದೀನ್ ಅಲಿ, ಸುರೇಶ್ ಉಪಸ್ಥಿತರಿದ್ದರು.