ದಾವಣಗೆರೆ, ಸೆ.10- ಎಐಡಿಎಸ್‌ಓ ವತಿಯಿಂದ ಇದೇ ದಿನಾಂಕ 28 ರಂದು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ 117 ನೇ ಜನ್ಮ ದಿನದ ಅಂಗವಾಗಿ `ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಗತ್ ಸಿಂಗ್‌ರ ಪಾತ್ರ’ ಎಂಬ ವಿಷಯ ಕುರಿತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ನಿಗದಿತ ದಿನಾಂಕದಂದು ಸಂಬಂಧಿಸಿದ ಶಾಲೆ, ಕಾಲೇಜು, ಸಂಸ್ಥೆಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ.ಎಸ್ ತಿಳಿಸಿದ್ದಾರೆ. ವಿವರಕ್ಕೆ ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷರಾದ ಪೂಜಾ ನಂದಿಹಳ್ಳಿ (95914 06615) ಅವರನ್ನು ಸಂಪರ್ಕಿಸಬಹುದು.
December 29, 2024