ದಾವಣಗೆರೆ, ಸೆ.10- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರಿನ ಮೇಲೆ ಮಹಿಳೆಯೊಬ್ಬಳು ಕಲ್ಲು ಎಸೆದ ಘಟನೆ ನಗರದ ಎಸ್.ಪಿ ಕಚೇರಿ ಮುಂಭಾಗ ಮಂಗಳವಾರ ನಡೆದಿದೆ.
ಕಾರು ಕಚೇರಿಯಿಂದ ಹೊರ ಹೋಗುವಾಗ ಹರಿಹರ ಪಟ್ಟಣದ ಸರೋಜಾದಾಸ್ ಎಂಬಾಕೆ ಕಲ್ಲು ಎಸೆದಿದ್ದಾಳೆ. ಈ ವೇಳೆ ಕಾರಿನಲ್ಲಿ ಎಸ್ಪಿ ಇರಲಿಲ್ಲ.
ಈ ಕುರಿತು ಸ್ಪಷ್ಟನೆ ನೀಡಿದ ಪೊಲೀಸ್ ಇಲಾಖೆ, ಕಾರು ಹೊರಗಡೆ ಹೋಗುತ್ತಿದ್ದಾಗ ಗೇಟಿನ ಬಳಿ ನಿಂತಿದ್ದ ಮಹಿಳೆ ತನ್ನ ಕೈಯಲ್ಲಿದ್ದ ಸಣ್ಣ ಕಲ್ಲಿನಿಂದ ಕಾರಿನ ಗ್ಲಾಸ್‌ಗೆ ತಾಗಿಸಿದ್ದು ಕಾರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿದೆ.