ಹೊಲಿಗೆ ಯಂತ್ರ ಖರೀದಿಗೆ ಅರ್ಜಿ

ದಾವಣಗೆರೆ, ಸೆ. 10 – ಹೊಲಿಗೆ ತರಬೇತಿ ಪಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಸಮುದಾಯಕ್ಕೆ ಸೇರಿದ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಖರೀದಿಸಿ ವಿತರಿಸುವ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಮಹಾನಗರ ಪಾಲಿಕೆಯ ವೆಬ್‍ಸೈಟ್  www.davanagerecity.gov.in ಮೂಲಕ ಅಥವಾ ಕಚೇರಿಗೆ ಖುದ್ದು ಭೇಟಿ ನೀಡಿ ಇದೇ ದಿನಾಂಕ 26 ರೊಳಗಾಗಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಲ್ಯಾಣ ಶಾಖೆ, ಮಹಾನಗರಪಾಲಿಕೆ, ದಾವಣಗೆರೆ (ಹಳೇ ಕಂದಾಯ ಶಾಖೆ ಕಟ್ಟಡ) ಇಲ್ಲಿ ಸಂಪರ್ಕಿಸಲು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.

error: Content is protected !!