ಬಿ.ಸಿ.ಎಂ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಮೇಲೆ ಪೆೋಲೀಸ್ ದೌರ್ಜನ್ಯ ಸಿ.ಐ.ಟಿ.ಯು ಜಿಲ್ಲಾ ಸಮಿತಿ ಆರೋಪ

ದಾವಣಗೆರೆ, ಆ.4-   ನಗರದ  ಬಿ.ಸಿ.ಎಂ. ಇಲಾಖೆ ಆಯುಕ್ತರ ಕಛೇರಿ ಎದುರು  ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಮೇಲೆ ಪೆೊಲೀಸರು ಬಲ ಪ್ರಯೋಗಿಸಿ, ದೌರ್ಜನ್ಯದ ಮೂಲಕ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ ಎಂದು ಸಿಐಟಿಯು ಜಿಲ್ಲಾ ಸಮಿತಿ ಆರೋಪಿಸಿದೆ. 

ಈ ಹಿಂದೆ ಫ್ರೀಡಂ ಪಾರ್ಕಿನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದ್ದರೂ, ಈ ಬಡ ನೌಕರರ ಜ್ವಲಂತ ಸಮಸ್ಯೆಗಳು ಪರಿಹಾರ ಕಾಣಲಿಲ್ಲ. ಈ ಬಗ್ಗೆ ಇಲಾಖೆ ಸಚಿವರು ಹಾಗೂ ಉನ್ನತ ಅಧಿಕಾರಿಗಳ ಗಮನ ಸೆಳೆದು ತಮ್ಮ ನ್ಯಾಯಯುತ ಹಕ್ಕೊತ್ತಾಯಗಳ ಪರಿಹಾರಕ್ಕಾಗಿ ನಡೆಸಿರುವ ಹಾಸ್ಟೆಲ್ ನೌಕರರ ಶಾಂತಿಯುತ ಪ್ರತಿಭಟನೆಯನ್ನು ಅನುಕಂಪದಿಂದ ನೋಡಬೇಕು.   ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘಟನೆ ಮುಖಂಡರ ಜೊತೆ ಸಭೆ ನಡೆಸಿ ಸಾಧ್ಯ ಇರುವ ಪರಿಹಾರ ಮಾರ್ಗೋಪಾಯಗಳನ್ನು ಚರ್ಚಿಸಬೇಕು  ಎಂದು ಜಿಲ್ಲಾ ಸಮಿತಿ ಸಂಚಾಲಕ  ಕೆ.ಹೆಚ್. ಆನಂದರಾಜು ಆಗ್ರಹಿಸಿದ್ದಾರೆ.

error: Content is protected !!