ದಾವಣಗೆರೆ, ಸೆ. 3 – ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ದಾವಣಗೆರೆ ಜಿಲ್ಲೆಯ ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ತಿಳಿಸಿದ್ದಾರೆ.
2023-24ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 70ಕ್ಕೂ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣ ರಾಗಿರುವ ಪತ್ರಕರ್ತರ ಮಕ್ಕಳು ದಾವಣಗೆರೆ ಜಿಲ್ಲಾ ಮಟ್ಟದ ಪುರಸ್ಕಾರಕ್ಕೆ ಅರ್ಹರಾಗಿರುತ್ತಾರೆ. ಎಸ್ಸೆಸ್ಸೆಲ್ಸಿ ಮಕ್ಕಳನ್ನು `ವಿದ್ಯಾಸಿರಿ’ ಪ್ರಶಸ್ತಿಯೊಂದಿಗೆ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. 70ಕ್ಕೂ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳನ್ನು `ವಿದ್ಯಾರತ್ನ’ ಪ್ರಶಸ್ತಿಯೊಂದಿಗೆ ಸನ್ಮಾನಿಸಿ, ಸ್ಮರಣಿಕೆ, ಫಲ-ಪುಷ್ಪದೊಂದಿಗೆ ಗೌರವಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 120ಕ್ಕೂ ಹೆಚ್ಚು ಅಂಕಗಳನ್ನು ಪಡೆದ ಪತ್ರಕರ್ತರ ಮಕ್ಕಳನ್ನು ವಿಶೇಷವಾಗಿ ಪುರಸ್ಕರಿಸಲಾಗುತ್ತದೆ ಎಂದು ಮಂಜುನಾಥ ವಿವರಿಸಿದ್ದಾರೆ. ಅರ್ಹ ಪತ್ರಕರ್ತರ ಮಕ್ಕಳು, ಸ್ವ-ವಿವರ, ಭಾವಚಿತ್ರ, ಅಂಕಪಟ್ಟಿ ಜೆರಾಕ್ಸ್ ಪ್ರತಿಯೊಂದಿಗೆ ಇದೇ ದಿನಾಂಕ 6ರೊಳಗಾಗಿ ಸಲ್ಲಿಸಬೇಕು. ಆಯ್ಕೆಯಾದ ವಿದ್ಯಾರ್ಥಿಗಳನ್ನು ಬರುವ ಸೆಪ್ಟೆಂಬರ್ 13ರಂದು ನಡೆಯುವ ಸಮಾರಂಭದಲ್ಲಿ ಪುರಸ್ಕರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ವಿಳಾಸ : ಎ. ಫಕೃದ್ದೀನ್, ಪ್ರಧಾನ ಕಾರ್ಯದರ್ಶಿ, ಸಂಪಾದಕರು, `ಇಮೇಜ್’ ಪತ್ರಿಕಾ ಕಾರ್ಯಾಲಯ, ನಾಯಕ ವಿದ್ಯಾರ್ಥಿ ನಿಲಯದ ಎದುರಿನ ಮಹಾನಗರ ಪಾಲಿಕೆ ಕಾಂಪ್ಲೆಕ್ಸ್, ಪಿ.ಜೆ. ಬಡಾವಣೆ, ದಾವಣಗೆರೆ. ವಿವರಕ್ಕೆ 94482-77772, ಅಥವಾ 86180-02539 ಅಥವಾ 94487 28858ರಲ್ಲಿ ಸಂಪರ್ಕಿಸಲು ಖಜಾಂಚಿ ಎನ್.ವಿ. ಬದರಿನಾಥ್ ತಿಳಿಸಿದ್ದಾರೆ.