ದಾವಣಗೆರೆ, ಸೆ.1- ನಗರದ ಶಾಮನೂರು ರಸ್ತೆಯಲ್ಲಿರುವ ಶ್ರೀ ಮಹಾಗಣಪತಿ – ಶ್ರೀ ವೀರಭದ್ರೇಶ್ವರ ಸೇವಾ ಟ್ರಸ್ಟ್ ಹೆಸರಿನಲ್ಲಿ ಅನಾಮಧೇಯ ವ್ಯಕ್ತಿಗಳು ಚಂದಾ – ದೇಣಿಗೆಯನ್ನು ಪಡೆಯುತ್ತಿದ್ದಾರೆಂದು ಟ್ರಸ್ಟ್ನ ಗಮನಕ್ಕೆ ಬಂದಿದ್ದು, ಈ ಕುರಿತು ಟ್ರಸ್ಟ್ ಭಕ್ತರ ಬಳಿ ಹೋಗಿ ಚಂದಾ – ದೇಣಿಗೆಯನ್ನು ಸಂಗ್ರಹಿಸುತ್ತಿಲ್ಲ ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.
ಸದ್ಭಕ್ತರು ಸೇವಾ ಕಾರ್ಯಕ್ಕಾಗಿ ಚಂದಾ – ದೇಣಿಗೆ ಹಣವನ್ನು ನೀಡಲು ಇಚ್ಛಿಸಿದ್ದಲ್ಲಿ ದೇವಸ್ಥಾನದಲ್ಲಿಯೇ ಅರ್ಚಕರ ಬಳಿ ನೀಡಿ ರಸೀದಿ ಪಡೆದುಕೊಳ್ಳಬೇಕು ಎಂದು ಪ್ರಕಟಣೆ ಕೋರಿದೆ.