ದಾವಣಗೆರೆ ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರವಾದ ಇಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಬಂಡೆರಂಗಪ್ಪ ಸ್ವಾಮಿಯ ಪರವು ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಶ್ರೀ ಸವಗದ್ದಿಗೆ ಸಂಗಮೇಶ್ವರ ದೇವಸ್ಥಾನದ ಶ್ರೀ ಸವಗದ್ದಿಗೆ ಸಂಗಮೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಮೆರವಣಿಗೆ ಮುಖಾಂತರ ಪುಟಗನಾಳು ರಸ್ತೆಯಲ್ಲಿರುವ ಶ್ರೀ ಬಂಡೆರಂಗಪ್ಪ ದೇವಸ್ಥಾನಕ್ಕೆ ಹೊರಡುವುದು.
February 25, 2025