ದಾವಣಗೆರೆ, ಆ. 29- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಸೂಚನೆ ಮೇರೆಗೆ ನಾಳೆ ದಿನಾಂಕ 30 ರ ಶುಕ್ರವಾರ ಮತ್ತು ನಾಡಿದ್ದು ದಿನಾಂಕ 31ರ ಶನಿವಾರ ಜಿಲ್ಲೆಯಾದ್ಯಂತ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ವಿಶೇಷ ತಪಾಸಣೆ ನಡೆಸಲಾಗುವುದು ಎಂದು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ.ಜೆ.ಎಸ್.ನಾಗರಾಜ್ ತಿಳಿಸಿದ್ದಾರೆ. ಎಫ್.ಎಸ್.ಎಸ್.ಎ ಗುಣಮಟ್ಟ ಪರೀಕ್ಷೆಗಾಗಿ ಎರಡು ದಿನಗಳಂದು ವಿಶೇಷ ಅಭಿಯಾನ ಮಾಡಲಿದ್ದು, ಸಾರ್ವಜನಿಕರು ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಅರಿವು ಹೊಂದಬೇಕೆಂಬ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ. ನಾಗರಾಜ್ ತಿಳಿಸಿದ್ದಾರೆ.
January 12, 2025