ಕೆರೆಗಳಿಗೆ ನೀರು ಹರಿಸಲು ಒತ್ತಾಯಿಸಿ ನಾಳೆ ಜಾಗೃತಿ ಜಾಥಾ

ದಾವಣಗೆರೆ, ಆ. 28-   ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯಿಂದ ಚನ್ನಗಿರಿ ತಾಲ್ಲೂಕಿನ ನಿಗದಿತ ಕೆರೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಇದೇ ದಿನಾಂಕ 30 ರಂದು ಶುಕ್ರವಾರ ಬೆಳಗ್ಗೆ 10.30ಕ್ಕೆ ಕೃಷಿ ಮಾರುಕಟ್ಟೆ ಆವರಣದಿಂದ ತಾಲೂಕಿನ ದಂಡಾಧಿಕಾರಿ ಕಚೇರಿವರೆಗೆ ಜಾಗೃತಿ ಜಾಥಾ ನಡೆಸಿ, ಮನವಿ ಸಲ್ಲಿಸ ಲಾಗುವುದು ಎಂದು ಖಡ್ಗ ಸ್ವಯಂ ಸೇವಕರ ಸಂಘದ ರಘು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಾಸ್ವೇಹಳ್ಳಿ ನೀರಾವರಿ ಯೋಜನೆ 2016 ರಲ್ಲಿ ಪ್ರಾರಂಭವಾಗಿ ಕಳೆದ ಒಂದೂವರೆ ತಿಂಗಳ ಹಿಂದೆ ಮುಕ್ತಾಯ ವಾಗಿದೆ. ಚನ್ನಗಿರಿ ತಾಲ್ಲೂಕಿನ ನಿಗದಿತ ಕೆರೆ ಗಳಿಗೆ ನೀರು ಹರಿಸುವಲ್ಲಿ ವಿಳಂಬವಾಗಿದೆ. ಕೂಡಲೇ ನೀರು ಹರಿಸಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಒಂದು ವಾರದ ಗಡುವು ನೀಡ ಲಾಗುವುದು. ಒಂದೊಮ್ಮೆ ನೀರು ಹರಿಸದಿದ್ದ ಲ್ಲಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕ ಲಾಗುವುದು ಎಂದು ಎಚ್ಚರಿಸಿದರು.

ಸಂಘದ ಸದಸ್ಯ ಬಿ. ಚಂದ್ರಹಾಸ ಮಾತನಾಡಿ, ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಮೊದಲ ಹಂತದ ಪ್ರಕಾರ ಚನ್ನಗಿರಿ ಕಸಬಾ ಹೋಬಳಿಯ 76, ಸಂತೇಬೆನ್ನೂರು ಹೋಬಳಿಯ 26, ಹೊಳಲ್ಕೆರೆ ತಾಲ್ಲೂಕಿನ  26 ಕೆರೆಗಳಿಗೆ ನೀರು ಹರಿಸಬೇಕು. ಈಗ ಕಸಬಾ ಹೋಬಳಿಯಲ್ಲಿ 120, ಸಂತೇಬೆನ್ನೂ ರಿನ 60, ಹೊಳಲ್ಕೆರೆ ತಾಲೂಕಿನ 100, ಭದ್ರಾ ವತಿ, ಶಿವಮೊಗ್ಗದ ತಲಾ 5,  ಹೊನ್ನಾಳಿಯ 6 ಕೆರೆಗಳಿಗೆ ನೀರು ಹರಿಸಬೇಕು. ಎಲ್ಲ ಕಾಮಗಾರಿ ಮುಕ್ತಾಯಗೊಂ ಡಿದ್ದರೂ ನೀರು ಹರಿಸುತ್ತಿಲ್ಲ. ತುಂಗಭದ್ರಾ ನದಿಯಿಂದ ಅ. 31 ರವರೆಗೆ ನೀರು ಹರಿಸಲು ಮಾತ್ರ ಅವಕಾಶ ಇದೆ.‌ ಅದರೊಳಗೆ ನೀರು ಹರಿಸಲು ಜಿಲ್ಲಾಡಳಿತ ಸಂಬಂಧಿತರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಶ್ರೀ ಕೇದಾರಲಿಂಗ ಶಿವಾಚಾರ್ಯ ಸ್ವಾಮೀಜಿ, ಸೈಯದ್ ನಯಾಜ್, ಜಿ.ಎಸ್.‌ ನಾಗೇಂದ್ರಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!