ಡಿಸಿಎಂ ಟೌನ್‌ಶಿಪ್ ವಾಸವಿ ಅಮ್ಮನವರ ದೇವಸ್ಥಾನದ ಬಳಿ ನಿರ್ಮಾಣಗೊಂಡಿರುವ ಶ್ರೀಮತಿ ಪ್ರೇಮ ಶ್ರೀ ರಾಜನಹಳ್ಳಿ ರಮಾನಂದ ಕಲ್ಯಾಣ ಮಂಟಪದ ಉದ್ಘಾಟನೆಯ ಸಮಾ ರೋಪ ಸಮಾರಂಭವು ಶ್ರೀ ವಾಸವಿ ಸೇವಾ ಸಂಘದ ವತಿಯಿಂದ ಇಂದು ಬೆಳಿಗ್ಗೆ 11.30 ಕ್ಕೆ ನಡೆಯಲಿದೆ.
ರಾಮಕೃಷ್ಣ ಮಿಷನ್‌ನ ಕಾರ್ಯ ದರ್ಶಿ ಶ್ರೀ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್ ಸಾನ್ನಿಧ್ಯ ವಹಿಸುವರು.
ವಾಸವಿ ಸೇವಾ ಸಂಘದ ಅಧ್ಯಕ್ಷ ಕೆ.ಎಸ್. ರುದ್ರಶ್ರೇಷ್ಠಿ ಅಧ್ಯಕ್ಷತೆ ವಹಿಸ ಲಿದ್ದು, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ನಿರ್ದೇಶಕ ಆರ್. ಗಿರೀಶ್ ಉದ್ಘಾಟಿಸು ವರು. ವಿಶೇಷ ಆಹ್ವಾನಿತರಾಗಿ ವೈ. ತಿಪ್ಪೇಸ್ವಾಮಿ ಶ್ರೇಷ್ಠಿ, ವೈ. ಅನಂತ ಶ್ರೇಷ್ಠಿ, ಬಿ.ಹೆಚ್. ಕೃಷ್ಣಮೂರ್ತಿ ಶ್ರೇಷ್ಠಿ, ಎಸ್. ನಾಗರಾಜ್ ಶ್ರೇಷ್ಠಿ ಆಗಮಿಸುವರು.
ಸಂಜೆ 6.30 ರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.