ದಾವಣಗೆರೆ, ಆ. 28- ಶ್ರೀ ಧನ್ವಂತರಿ ಆಯುರ್ವೇದ ಔಷಧ ಪ್ರತಿನಿಧಿಗಳ ಸಂಘದ ವತಿಯಿಂದ ಇದೇ ದಿನಾಂಕ 31 ಮತ್ತು ಸೆ. 1 ರಂದು ಎರಡು ದಿನಗಳ ಕಾಲ ನಗರದ ಹದಡಿ ರಸ್ತೆಯಲ್ಲಿನ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ `ಆರೋಗ್ಯ ಮೇಳ-2024′ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ. ಮಧುಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇಂದಿನ ಒತ್ತಡದ ಜೀವನ ಶೈಲಿಗೆ ಆಯುರ್ವೇದವೇ ಮದ್ದು ಎಂಬ ಸದುದ್ದೇಶದಿಂದ ಈ ಆರೋಗ್ಯ ಮೇಳವನ್ನು ಆಯೋಜಿಸಲಾಗಿದೆ. ಪ್ರತಿ ದಿನ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಎಲ್ಲಾ ರೀತಿಯ ಕಾಯಿಲೆಗಳ ಬಗ್ಗೆ ತಪಾಸಣೆ ಮಾಡಲಾಗುವುದು ಎಂದು ತಿಳಿಸಿದರು.
ಆ. 31 ರಂದು ಬೆಳಿಗ್ಗೆ 9 ಕ್ಕೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಎಂ.ಹೆಚ್. ಅಣ್ಣಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಆಯುಷ್ ಅಧಿಕಾರಿ ಯು.ಬಿ. ಯೋಗೇಂದ್ರ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆಂದರು.
ಪತ್ರಿಕಾಗೋಷ್ಠಿಯಲ್ಲಿ ಎನ್. ರಾಜೇಶ್, ಜಿ. ಅಮರೇಶ್, ರಾಜೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.