ಶ್ರೀ ವಾಸವಿ ಸೇವಾ ಸಂಘದಿಂದ ಡಿ.ಸಿ.ಎಂ. ಟೌನ್‌ಷಿಪ್ ನಲ್ಲಿರುವ ವಾಸವಿ ದೇವಿ ದೇವಸ್ಥಾನದಲ್ಲಿ ಶ್ರೀಮತಿ ಪ್ರೇಮಾ ರಾಜನಹಳ್ಳಿ ಶ್ರೀ ರಮಾನಂದ್ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭ ಕಾರ್ಯ ಕ್ರಮವನ್ನು ಇಂದಿನಿಂದ ಮೂರು ದಿನ ಹಮ್ಮಿಕೊಳ್ಳಲಾಗಿದೆ.
ಇಂದು ಬೆಳಿಗ್ಗೆ 6.30 ರಿಂದ ವಿವಿಧ ಪೂಜೆಗಳು ಜರುಗಲಿವೆ. ನಂತರ ಬೆಳಿಗ್ಗೆ 11.30ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸುವ ಆರ್ಯವೈಶ್ಯ ಕುಲ ಗುರುಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಡಾ|| ಬಿ.ಎಸ್. ನಾಗಪ್ರಕಾಶ್ ವಹಿಸಲಿದ್ದು, ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ರಾಜನಹಳ್ಳಿ ರಮಾನಂದ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ವಿಪ ಸದಸ್ಯ ಡಿ.ಎಸ್. ಅರುಣ್, ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್‌ನ ಅಧ್ಯಕ್ಷ ಚನ್ನಗಿರಿ ವಿರೂಪಾಕ್ಷಪ್ಪ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ವಿಪ ಸದಸ್ಯ ಟಿ.ಎ. ಶರವಣ, ವಿಶ್ರಾಂತ ಅಪರ ನಿರ್ದೇಶಕ ಡಾ|| ಜೆ.ವಿ. ನಂದನ್‌ಕುಮಾರ್, ವಿಶೇಷ ಆಹ್ವಾನಿತರಾಗಿ ಕಟ್ಟಡದ ತಾಂತ್ರಿಕ ನಿರ್ದೇಶಕ ಕೆ.ಎಲ್. ರವೀಂದ್ರನಾಥ ಶ್ರೇಷ್ಠಿ, ಹೆಚ್.ಆರ್. ಕಾಶಿ ವಿಶ್ವನಾಥ್ ಶ್ರೇಷ್ಠಿ, ವರ್ತಕ ಎಲ್.ಜೆ. ರಾಧಾಕೃಷ್ಣ ಶ್ರೇಷ್ಠಿ ಉಪಸ್ಥಿತರಿರುವರು. ಶ್ರೀ ವಾಸವಿ ಸೇವಾ ಸಂಘದ ಅಧ್ಯಕ್ಷ ಕೆ.ಎಸ್. ರುದ್ರ ಶ್ರೇಷ್ಠಿ ಗೌರವ ಉಪಸ್ಥಿತಿ ಇರುವರು.
ಸಂಜೆ 5.30 ರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದು, ಶ್ರೀ ಕಲಾಂಜಲಿ ಕಲಾ ಟ್ರಸ್ಟ್ ಬಳ್ಳಾರಿ ಇವರಿಂದ ಶ್ರೀ ಶ್ರೀನಿವಾಸ ಕಲ್ಯಾಣ ನಾಟಕ ಪ್ರದರ್ಶನಗೊಳ್ಳಲಿದೆ.