ಹರಿಹರದಲ್ಲಿ ಅಪರಿಚಿತನ ಶವ ಪತ್ತೆ

ಹರಿಹರ, ಆ. 26 – ಹರಿಹರ ನಗರದ ಶ್ರೀ ಅರವಿಂದ ಮೆಟಲ್ ಸ್ಟೋರ್ ಮಳಿಗೆ ಅಂಗಡಿ ಮುಂದೆ ಸಮಾರು 40 ರಿಂದ 45 ವರ್ಷದ ಮೃತ ದೇಹ ಪತ್ತೆಯಾಗಿರುತ್ತದೆ. ಮೃತನ ಬಗ್ಗೆ ಮಾಹಿತಿ ಇರುವುದಿಲ್ಲ.  

ಮೃತನು ನೀಲಿ ಮತ್ತು ಬಿಳಿ ಬಣ್ಣದ ಶರ್ಟ್, ಸಿಮೆಂಟ್ ಕಲರ್ ಪ್ಯಾಂಟು ಹಾಗೂ ಕಪ್ಪು ಬಣ್ಣದ ಡ್ರಾಯರ್ ಧರಿಸಿರುತ್ತಾನೆ. ಸಂಬಂಧಪಟ್ಟವರು ಹರಿಹರ ಟೌನ್ ಪಿಎಸ್, ಪೊಲೀಸ್ ನಿಯಂತ್ರಣ ಕೊಠಡಿಗೆ ಅಥವಾ 08192-272016, 9480803257 ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸಲು ಹರಿಹರ ಪೊಲೀಸ್ ಠಾಣೆ ನಿರೀಕ್ಷಕರಾದ ಎಸ್.ದೇವಾನಂದ ತಿಳಿಸಿದ್ದಾರೆ.

error: Content is protected !!