ಹರಿಹರ, ಆ. 26 – ನಗರದ ಕಸಬಾ ಊರಮ್ಮ ದೇವಸ್ಥಾನದ ಹಿಂಭಾಗದಲ್ಲಿ ನಗರ ಸಭೆಗೆ ಸೇರಿದ ಕಾಂಪ್ಲೆಕ್ಸ್ ಮಳಿಗೆ 18 ರಲ್ಲಿ ಸೋನಿ ಎಲೆಕ್ಟ್ರಾನಿಕ್ಸ್ ರಿಪೇರಿ ಅಂಗಡಿ ಮುಂದೆ ಸಮಾರು 50 ರಿಂದ 60 ವರ್ಷದ ಮೃತ ದೇಹ ಪತ್ತೆಯಾಗಿರುತ್ತದೆ. ಮೃತನ ಬಗ್ಗೆ ಮಾಹಿತಿ ಇರುವುದಿಲ್ಲ.
ಮೃತನ ಬಲ ಗೈ ಮೇಲೆ ಪಲ್ಲವಿ ಅಂತ ಹಚ್ಚೆ ಗುರುತು ಇರುತ್ತದೆ. ಇವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಹರಿಹರ ಟೌನ್ ಪಿಎಸ್, ಪೊಲೀಸ್ ನಿಯಂತ್ರಣ ಕೋಣೆಗೆ ಅಥವಾ ದೂ.ಸಂ. 08192-272016, 253100, 253400, 9480803257 ಗೆ ಕರೆ ಮಾಡಿ ತಿಳಿಸಲು ಹರಿಹರ ಪೊಲೀಸ್ ಠಾಣೆ ನಿರೀಕ್ಷಕರಾದ ಎಸ್.ದೇವಾನಂದ ತಿಳಿಸಿದ್ದಾರೆ.