ದಾವಣಗೆರೆ, ಆ. 27 – ಮೀಡಿಯಾ ಸ್ಟಡಿ ಸೆಂಟರ್ ಹಾಗೂ ಪರಿಷತ್ ಸಂಸ್ಥೆಯ ಸಹಭಾಗಿತ್ವದಲ್ಲಿ ಉತ್ಕೃಷ್ಟ ಶಿಕ್ಷಣ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ `ಅನನ್ಯ ವಿದ್ಯಾ ದೇಗುಲ’ ಹಾಗೂ ಅತ್ಯುತ್ತಮ ಸಾಧನೆಗೈದ ಶಿಕ್ಷಕರಿಗೆ `ಆಚಾರ್ಯ ಶ್ರೀ- 2024′ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಆಸಕ್ತ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ತಮ್ಮ ಸ್ವವಿವರ ಹಾಗೂ ಸೇವಾ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 15ರ ಒಳಗಾಗಿ ಅರ್ಜಿ ಸಲ್ಲಿಸಬ ಹುದಾಗಿದ್ದು, ಸೂಚಕರು ಸಹ ನಾಮ ನಿರ್ದೇಶನ ಮಾಡಬಹುದು. ಅರ್ಜಿ ಯನ್ನು [email protected] ಗೆ ಮೇಲ್ ಮಾಡಬಹುದು. ಮಾಹಿತಿಗಾಗಿ 7259456555, 8095175780 ಸಂಪರ್ಕಿಸಿ.