ನಾಗತಿ ಕಟ್ಟೆ ತಾಂಡದಲ್ಲಿ ಇಂದು, ನಾಳೆ ಧಾರ್ಮಿಕ ಆಚರಣೆ, ಜಾನಪದ ಕಲಾ ಉತ್ಸವ

ಶ್ರೀಕೃಷ್ಣ ದೇವಸ್ಥಾನ ಟ್ರಸ್ಟ್, ಕಲಾ ಉತ್ಸವ ಸಮಿತಿ, ಯುವಕರ ಸಂಘ ಹಾಗೂ ಪೂಜಾರ ವಂಶಸ್ಥರು ಇವರ ವತಿಯಿಂದ ಹರಪನಹಳ್ಳಿ ತಾಲ್ಲೂಕಿನ ಶ್ರೀ ಕ್ಷೇತ್ರ ನಾಗತಿ ಕಟ್ಟೆ ತಾಂಡದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಇಂದು ಮತ್ತು ನಾಳೆ ಧಾರ್ಮಿಕ ಆಚರಣೆ ಮತ್ತು ವಿವಿಧ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ‌.

ಇಂದು ಸಂಜೆ 6ಕ್ಕೆ ಸ್ವಾಮಿಯ ಅಭಿಷೇಕ, ಅಲಂಕಾರ, ಮಂಗಳಾರತಿ ಪೂಜಾ ಕಾರ್ಯಕ್ರಮ ರಾತ್ರಿ 12 ಗಂಟೆಗೆ 9ನೇ ದಿನದ ಉಪವಾಸದೊಂದಿಗೆ ಪ್ರಥಮ ಹೋಮ, (ದಾಳ್ ಬೋಗ್) ಪ್ರಸಾದ ವಿತರಣೆ ನಡೆಯಲಿದೆ.

ನಾಳೆ ಮಂಗಳವಾರ ಬೆಳಿಗ್ಗೆ ಸ್ವಾಮಿಯ ಐತಿಹಾಸಿಕ ಚಿರಸ್ವರೂಪಿ ದೇವರ ದಿವ್ಯ ದರ್ಶನ ಮತ್ತು ತೊಟ್ಟಿಲು ಪೂಜಾ ಕಾರ್ಯಕ್ರಮ. ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಶ್ರೀ ಕೃಷ್ಣ ರಥೋತ್ಸವ ಮತ್ತು ಗ್ರಾಮೀಣ ಜನಪದ ಕಲಾ ಮೇಳವನ್ನು ಶಾಸಕಿ ಲತಾ ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದು, ಸಂಜೆ 5.30ಕ್ಕೆ ಮಹಾಹೋಮ (ದಾಳ್ ಬೋಗ್) ಮತ್ತು ಮಹಾಮಂಗಳಾರತಿ ಹಾಗೂ ಸರ್ವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 8.30ಕ್ಕೆ ರಸ ಮಂಜರಿ ಕಾರ್ಯಕ್ರಮ ಜರುಗಲಿದೆ.

ಆ.27 ರಂದು ನಡೆಯಲಿರುವ ಬೆಳಿಗ್ಗೆ 11ಕ್ಕೆ ನಡೆಯಲಿರುವ ಕಲಾ ಉತ್ಸವದಲ್ಲಿ ಭಾಗವಹಿಸಲಿಚ್ಚಿಸುವ ಕಲಾ ತಂಡಗಳಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಾಗವಹಿಸುವವರು ಕೃಷ್ಣಾನಾಯ್ಕ್ ಮೊ: 9901241448 ಗೆ ಸಂಪರ್ಕಿಸಬಹುದಾಗಿದೆ.

error: Content is protected !!