ಚನ್ನಗಿರಿಯಲ್ಲಿ ಇಂದು `ಗ್ರಾಮೀಣ ಬದುಕು ಮತ್ತು ಕನ್ನಡ ಸಾಹಿತ್ಯ’ ವಿಶೇಷ ಉಪನ್ಯಾಸ

ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ,  ಕನ್ನಡ ಸಾಹಿತ್ಯ ಪರಿಷತ್ತು ಚನ್ನಗಿರಿ ಹಾಗೂ ಸರ್ಕಾರಿ ನೌಕರರ ಸಂಘ ಚನ್ನಗಿರಿ ಇವರ ಸಹಯೋಗದಲ್ಲಿ ಸರ್ಕಾರಿ ನೌಕರರ ಭವನದಲ್ಲಿ ಇಂದು ಬೆಳಿಗ್ಗೆ 10.30 ಗಂಟೆಗೆ `ಗ್ರಾಮೀಣ ಬದುಕು ಮತ್ತು ಕನ್ನಡ ಸಾಹಿತ್ಯ’ ಕುರಿತು ವಿಷಯಾಧಾರಿತವಾದ ಗ್ರಾಮ ಲೋಕ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯ ಚನ್ನಪ್ಪ ಅಂಗಡಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಚನ್ನಗಿರಿ ತಾಲ್ಲೂಕು ಕಸಾಪ  ಅಧ್ಯಕ್ಷ ಬಸವಾಪಟ್ಟಣದ ಎಲ್.ಜಿ. ಮಧುಕುಮಾರ್ ವಹಿಸಲಿದ್ದಾರೆ. `ಕನ್ನಡ ಸಾಹಿತ್ಯ ಮತ್ತು ಯುವ ಪೀಳಿಗೆ’ ಎಂಬ ವಿಷಯದ ಬಗ್ಗೆ ಡಾ.ದಾದಾಪೀರ್ ನವಿಲೇಹಾಳ್,  `ಕನ್ನಡ ಸಾಹಿತ್ಯದಲ್ಲಿ ಗ್ರಾಮೀಣ ಸೊಗಡು’ ಎಂಬ ವಿಷಯದ ಕುರಿತು ಗೀತಾ ಬಸವರಾಜ್,  `ಕನ್ನಡ ಸಾಹಿತ್ಯ ಮತ್ತು ಜನಪದ’ ಎಂಬ ವಿಷಯದ ಕುರಿತು ಸಂತೆಬೆನ್ನೂರು ಫೈಜ್ನಟ್ರಾಜ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಕೆ. ಶಶಿಧರ್, ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ.ಯು. ಚನ್ನಬಸಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ತಿಳಿಸಿದ್ದಾರೆ.

error: Content is protected !!