ದಾವಣಗೆರೆ, ಆ.22- ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸಾಮಾನ್ಯ ಸದಸ್ಯ ಸ್ಥಾನಗಳಿಗೆ ದಾವಣಗೆರೆ ಜಿಲ್ಲೆಯಲ್ಲಿ ನಡೆಯುವ ಚುನಾವಣೆಯ ವೇಳಾ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಮಾಹಿತಿಗಾಗಿ ಚುನಾವಣಾಧಿಕಾರಿ ಪ್ರೊ.ವೈ. ವೃಷಭೇಂದ್ರಪ್ಪ ಅವರನ್ನು ಕಚೇರಿ ಸಮಯ ಬೆಳಗ್ಗೆ 10ರಿಂದ ಸಂಜೆ 4ರ ಅವಧಿಯಲ್ಲಿ ಸಂಪರ್ಕಿಸಲು ಸೂಚಿಸಿದ್ದಾರೆ.
2ನೇ ಹಂತದ ಚುನಾವಣೆ ರಾಜ್ಯ ಘಟಕದ ಕಾರ್ಯ ನಿರ್ವಾಹಕ ಸಮಿತಿ ಸಾಮಾನ್ಯ ಸದಸ್ಯರ ಸ್ಥಾನಗಳಿಗೆ ಇದೇ ದಿನಾಂಕ 25ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5ರ ವರೆಗೆ ನಗರದ ಎವಿ ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಮತದಾನ ನಡೆಯಲಿದೆ ಎಂದು ತಿಳಿಸಿದ್ದಾರೆ.