ಪ್ರವಾಸೋದ್ಯಮ ಮೇಲ್ದರ್ಜೆಗೇರಿಸಲು ಪ್ರವಾಸಿ ತಾಣ ಆಯ್ಕೆ ಮಾಡಿ, ವೋಟ್ ಮಾಡಿ

ದಾವಣಗೆರೆ, ಆ.22- ಪ್ರವಾಸೋದ್ಯಮವನ್ನು ಮೇಲ್ದರ್ಜೆಗೇರಿಸಲು ಹಾಗೂ ಎಲ್ಲಾ ವರ್ಗಗಳ ಅಂದರೆ ಧಾರ್ಮಿಕ, ಸಾಂಸ್ಕೃತಿಕ, ಪಾರಂಪರಿಕ, ನೈಸರ್ಗಿಕ ಹಾಗೂ ವನ್ಯಜೀವಿ ಮತ್ತು ಸಾಹಸ ಚಟುವಟಿಕೆಗಳು ಹಾಗೂ ಇತರೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದೃಷ್ಟಿಕೋನದಲ್ಲಿ ಪ್ರಮುಖ ಪ್ರವಾಸಿ ತಾಣ ಗುರುತಿಸಿ, ವಿಶ್ವ ದರ್ಜೆಯಲ್ಲಿ ಅಭಿವೃದ್ಧಿಗೆ ದೇಕೋ ಅಪನಾ ದೇಶ್ ಜನರ ಆಯ್ಕೆ-2024ರ ಕಾರ್ಯಕ್ರಮ ಪ್ರಾರಂಭಿಸಲಾಗಿದೆ.

ಕಾರ್ಯಕ್ರಮದ ಭಾಗವಾಗಿ ನಾಗರಿಕರು, ಪ್ರವಾಸಿಗರು ಆದ್ಯತಾ ಪ್ರವಾಸಿ ತಾಣ ಆಯ್ಕೆ ಮಾಡಲು Mygov     ವೇದಿಕೆಯಡಿ ವೆಬ್‍ಲಿಂಕ್- https://innovateindia.mygov.in/dekho-apna-desh/ ಲಾಗಿನ್‍ನಲ್ಲಿ ನಾಗರಿಕರು, ಪ್ರವಾಸಿಗರು ಆದ್ಯತೆಯ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲು 15ನೇ ಸೆಪ್ಟೆಂಬರ್ 2024ರ ವರೆಗೆ ವೋಟ್ ಮಾಡುವ ಅವಕಾಶ ನೀಡಲಾಗಿದೆ. ಆಯ್ಕೆ ಮಾಡಿದ ನಂತರ ಆನ್‍ಲೈನ್‍ನಲ್ಲೇ ಪ್ರಶಂಸನಾ ಪ್ರಮಾಣ ಪತ್ರ ಪಡೆಯಬಹುದು.

ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದಂತೆ ಹರಿಹರೇಶ್ವರ ದೇವಸ್ಥಾನ, ಕೊಂಡಜ್ಜಿ ಕೆರೆ, ಕುಂದುವಾಡ ಕೆರೆ, ಇಂದಿರಾ ಪ್ರಿಯಾದರ್ಶಿನಿ ಪ್ರಾಣಿ ಸಂಗ್ರಹಾಲಯ, ಕಣ್ವಕುಪ್ಪೆ ಕೋಟೆ, ಚನ್ನಗಿರಿ ಕೋಟೆ, ಮದಕರಿ ನಾಯಕ ಸಮಾಧಿ ಸ್ಥಳ, ಮಾಯಕೊಂಡ ಪ್ರವಾಸಿ ತಾಣಗಳನ್ನು ಆಯ್ಕೆಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಹೀಗಾಗಿ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಿ, ವೋಟ್ ಮಾಡುವಂತೆ ದಾವಣಗೆರೆ ಜನತೆಗೆ ಕೋರಲಾಗಿದೆ. 

ಮಾಹಿತಿಗಾಗಿ ದೂ.ಸಂ: 08192-230123 ಸಂಪರ್ಕಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.

error: Content is protected !!