ಸ್ಮಾರ್ಟ್ ಸಿಟಿ ಯೋಜನೆಯ 4.20 ಲಕ್ಷ ರೂ. ಮೌಲ್ಯದ ಸಾಮಗ್ರಿ ಕಳ್ಳತನ

ದಾವಣಗೆರೆ, ಆ.21- ಮಂಡಿಪೇಟೆಯ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಯೋಜನೆ ಕಾಮಗಾರಿಗಳಿಗೆ ಬಳಸಬೇಕಾಗಿದ್ದ ವಿವಿಧ ಅಳತೆಯ 4.20 ಲಕ್ಷ ರೂ. ಮೌಲ್ಯದ ಕ್ಯಾಸ್ಟ್‌ ಐರನ್ ಗ್ರೇಟಿಂಗ್‌ಗಳನ್ನು ಕಳ್ಳತನ ಮಾಡಲಾಗಿದೆ.

ಈ ಕುರಿತು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಕುಮಾರ್ ಡಿ.ಎಲ್. ಬಸವನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ. ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಚೌಕಿಪೇಟೆ ರಸ್ತೆ, ಮಹಾವೀರ ರಸ್ತೆ, ಕೆ.ಆರ್.ಮಾರ್ಕೇಟ್ ರಸ್ತೆ (ಎಕ್ಸ್-ಮುನ್ಸಿಪಲ್ ರಸ್ತೆ), ಎಂ.ಜಿ. ರಸ್ತೆ, ಮಂಡಿಪೇಟೆ ರಸ್ತೆ, ಚಾಮರಾಜಪೇಟೆ ರಸ್ತೆ, ಬಿನ್ನಿಕಂಪನಿ ರಸ್ತೆ ಮತ್ತು ಎನ್. ಆರ್. ರಸ್ತೆಗಳಲ್ಲಿ ಮಳೆ ನೀರು ಹರಿದು ಹೋಗಲು 2019 ರಿಂದ 2022 ರವರೆಗೆ ಛೇಂಬರ್ ನಿರ್ಮಾಣ ಮಾಡಿ ಕ್ಯಾಸ್ಟ್ಐರನ್ ಗ್ರೇಟಿಂಗ್ ಗಳನ್ನು ಅಳವಡಿಸಲಾಗಿತ್ತು. ಈ ರಸ್ತೆಗಳ ಪೈಕಿ ಮಂಡಿಪೇಟೆ ರಸ್ತೆಯ ಸುತ್ತ-ಮುತ್ತ ಆಗಸ್ಟ್ 14  ಹಾಗೂ 19ರಂದು ಕ್ಯಾಸ್ಟ್‌ ಐರನ್ ಗ್ರೇಟಿಂಗ್‌ಗಳನ್ನು ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

error: Content is protected !!