`ಗೃಹಲಕ್ಷ್ಮಿ’ ಸುಳ್ಳು ವದಂತಿ ನಂಬಬೇಡಿ

ಚನ್ನಗಿರಿ, ಆ. 20 – ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತುಗಳು ಜಮೆ ಯಾಗಲು ಸ್ವಲ್ಪ ತಡವಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡು ಕೆಲವು ಸ್ಥಳೀಯ ಆನ್‍ಲೈನ್ ಸೆಂಟರ್‍ನವರು ಇ-ಕೆವೈಸಿ  ಮಾಡಿಸಬೇಕು, ಪಿಂಕ್ ಸ್ಮಾರ್ಟ್ ಕಾರ್ಡ್ ಇದ್ದರೆ ಮಾತ್ರ ಗೃಹಲಕ್ಷ್ಮಿ ಹಣ ಬರುತ್ತದೆ ಎಂಬ ಸುಳ್ಳು ವದಂತಿ ಹರಡುತ್ತಿದ್ದಾರೆ.  ಫಲಾನುಭವಿ ಗಳನ್ನು ನಂಬಿಸಿ ಅವರಿಂದ ಇಂತಿಷ್ಟು ಹಣ ಪಡೆದು ಕೊಂಡು ಎಡಿಟ್ ಮಾಡಿ ಡೂಪ್ಲಿಕೇಟ್ ಪಿಂಕ್ ಸ್ಮಾರ್ಟ್ ಕಾರ್ಡ್ ಮಾಡಿಕೊಟ್ಟು ವಂಚಿಸುತ್ತಿದ್ದಾರೆ. ಆದ್ದ ರಿಂದ  ಇಂತಹ ವಂಚಕರಿಂದ ಜಾಗೃತರಾಗಿರಲು ತಿಳಿಸಿ, ಸರ್ಕಾರ ಇಂತಹ ಕಾರ್ಡ್‍ಗಳಿಗೆ ಯಾವು ದೇ ಅಧಿಕೃತ ಆದೇಶ ನೀಡಿರುವುದಿಲ್ಲ ಎಂದು  ಚನ್ನಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.

error: Content is protected !!