ದಾವಣಗೆರೆ, ಆ.19 – ಬೆಂಗಳೂರಿನ ಸ್ಪರ್ಶ್ ಗ್ರೂಪ್ ಆಸ್ಪತ್ರೆಯ ದತ್ತಿ ವಿಭಾಗದ ಸ್ಪರ್ಶ್ಫೌಂಡೇಶನ್ ನಿವೃತ್ತ ಶಿಕ್ಷಕರಿಗೆ ಉಚಿತ ಕೀಲು ಬದಲಾವಣೆ ಶಸ್ತ್ರ ಚಿಕಿತ್ಸೆಯನ್ನು ಮಾಡಲಿದೆ. ಸ್ಪರ್ಶ್ ಅವರ ಈ ಉಪಕ್ರಮವು `ಗುರು ನಮನ’ ಕಾರ್ಯಕ್ರಮದ ಒಂದು ಭಾಗವಾಗಿದೆ. ಇದು ಗ್ರಾಮೀಣ ಹಿನ್ನೆಲೆಯ ನಿವೃತ್ತ ಶಿಕ್ಷಕರಿಗೆ ಕೀಲು ಬದಲಿ ಶಸ್ತ್ರ ಚಿಕಿತ್ಸೆಗಳನ್ನು ಉಚಿತವಾಗಿ ಒದಗಿಸುವ ಗುರಿಯನ್ನು ಹೊಂದಿದೆ.
ಇದೇ ದಿನಾಂಕ 22ರಂದು ನಗರದ ಮೋದಿ ಕಾಂಪೌಂಡ್ ನಲ್ಲಿರುವ ಎಸ್.ಎಸ್. ಸ್ಪೆಷಾಲಿಟಿ ಕ್ಲಿನಿಕ್ನಲ್ಲಿ ಈ ಶಿಬಿರ ಏರ್ಪಾಡಾಗಿದೆ. ಸಂಪರ್ಕಿಸಿ : ಶ್ರೀ ನಾಗರಾಜ್, 89424 43944, ಚೇತನ್ ಕುಮಾರ್, 9980033277.