ದಾವಣಗೆರೆ ತಾಲ್ಲೂಕು ಹೊಸನಾಯಕನಹಳ್ಳಿ ಗ್ರಾಮದಲ್ಲಿ ದಾವಣಗೆರೆ ವಿವಿ ಸಮಾಜಕಾರ್ಯ ಅಧ್ಯಯನ ವಿಭಾಗದ ವತಿಯಿಂದ ಹಮ್ಮಿಕೊಂಡಿರುವ `ಸಮಾಜಕಾರ್ಯ ಗ್ರಾಮೀಣ ಶಿಬಿರ’ದಲ್ಲಿ ಇಂದು ಬೆಳಿಗ್ಗೆ 10.30 ಕ್ಕೆ ಉಚಿತ ದಂತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಲಿದೆ.
ನಂತರ ಸಂಜೆ 5.30ಕ್ಕೆ ಸಂಪನ್ಮೂಲ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಎಸ್ಡಿಎಂಸಿ ಅಧ್ಯಕ್ಷ ಕೆ.ಎಸ್. ದಿನೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಎ.ವಿ. ಬಸವರಾಜಪ್ಪ, ಎನ್. ಓಂಕಾರಪ್ಪ, ಗಂಗಮ್ಮ, ಶ್ರೀಶೈಲ ಪಟ್ಟಣಶೆಟ್ಟಿ, ಚನ್ನಕೇಶ, ರೇವಣಸಿದ್ಧಪ್ಪ, ಮಲ್ಲಿಕಾರ್ಜುನ, ರೇವಣಗೌಡ, ಎಂ. ನೀಲ್ ಕುಮಾರ್, ಅನಿತಾ ತಿಪ್ಪೇಸ್ವಾಮಿ, ಜಿ.ಟಿ. ಕುಬೇಂದ್ರಪ್ಪ, ರಹಮತ್ ಉಲ್ಲಾ, ನಿಂಗರಾಜು, ಶ್ವೇತಾ, ಕವಿತಾ, ನೇತ್ರಾವತಿ, ಸುಜಾತ, ತಿಮ್ಮಣ್ಣ ಮತ್ತಿತರರು ಭಾಗವಹಿಸಲಿದ್ದಾರೆ.