ದಾವಣಗೆರೆ ವಿಶ್ವವಿದ್ಯಾನಿಲಯ ಸಮಾಜಕಾರ್ಯ ಅಧ್ಯಯನ ವಿಭಾಗದ ವತಿಯಿಂದ ಇಂದಿನಿಂದ ಇದೇ ದಿನಾಂಕ 23 ರವರೆಗೆ `ಸಮುದಾಯದತ್ತ ವಿಶ್ವವಿದ್ಯಾನಿಲಯದ ಚಿತ್ತ’ ಎನ್ನುವ ಘೋಷ ವಾಕ್ಯದೊಂದಿಗೆ ದಾವಣಗೆರೆ ತಾಲ್ಲೂಕಿನ ಹೊಸನಾಯಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಮಾಜಕಾರ್ಯ ಗ್ರಾಮೀಣ ಶಿಬಿರ ನಡೆಯಲಿದೆ. ಇಂದು ಸಂಜೆ 5.30 ಕ್ಕೆ ಶಿಬಿರದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ. ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಶಿಬಿರ ಉದ್ಘಾಟಿಸುವರು. ಕೈದಾಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಹೇಮಾವತಿ ರವಿಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಿಂಡಿಕೇಟ್ ಸದಸ್ಯ ಡಾ.ಬಿ.ಎನ್. ಉಮೇಶ್, ಕುಲಸಚಿವ (ಪ್ರಭಾರಿ) ಪ್ರೊ.ಯು.ಎಸ್. ಮಹಾಬಲೇಶ್ವರ, ದಾವಣಗೆರೆ ಸಿಆರ್‌ಸಿಯ ನಿರ್ದೇಶಕಿ ಮೀನಾಕ್ಷಿ, ಸಂಪನ್ಮೂಲ ವ್ಯಕ್ತಿ ಸಿ.ಸಿ.ಪಾವಟೆ, ಕುಲಸಚಿವ ಪ್ರೊ.ಸಿ.ಕೆ. ರಮೇಶ್, ಹಣಕಾಸು ಅಧಿಕಾರಿ ದ್ಯಾಮನಗೌಡ ಮುದ್ದನಗೌಡ, ತಾ.ಪಂ. ಇಓ ರಾಮಭೋವಿ, ಟಿಹೆಚ್‌ಓ ಡಾ.ಪಿ. ದೇವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಪುಷ್ಪಲತಾ, ಪಿಡಿಓ ಇಸ್ರತ್ ಜಹಾನ್, ಗ್ರಾ.ಪಂ. ಸದಸ್ಯರಾದ ಸರಸ್ವತಿ ಸಂತೋಷ್ ಕುಮಾರ್, ಹೆಚ್.ಪಿ. ಹುಚ್ಚೆಂಗೆಪ್ಪ, ಮುಖ್ಯ ಶಿಕ್ಷಕಿ ಜಿ.ಬಿ. ನಿರ್ಮಲ ಕೇಸರಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ಎಸ್. ದಿನೇಶ್ ಭಾಗವಹಿಸಲಿದ್ದಾರೆ.