ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಿಂಸಾತ್ಮಕ ಆಕ್ರಮಣವನ್ನು ವಿರೋಧಿಸಿ, ಸಮಾಜದ ಜಾಗೃತಿಗಾಗಿ ಇಂದು ಬೆಳಿಗ್ಗೆ 11.30ಕ್ಕೆ ರಾಜನಹಳ್ಳಿ ಹನುಮಂತಪ್ಪ ಛತ್ರದ ಬಳಿ ಇರುವ ವೃತ್ತದಿಂದ ಮಾನಪ ಸರಪಳಿ ರಚಿಸುವ ಮೂಲಕ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹಿಂದೂ ಹಿತರಕ್ಷಣಾ ಸಮಿತಿ ಸಂಚಾಲಕರಾದ ಸತೀಶ್ ಪೂಜಾರಿ ಹಾಗೂ ಸಿ.ಎಸ್.ರಾಜು ತಿಳಿಸಿದ್ದಾರೆ.
February 5, 2025