ಮಲೇಬೆನ್ನೂರು ಪುರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಿಸುವಂತೆ ಹೈಕೋರ್ಟ್‌ ಮೊರೆ

ಮಲೇಬೆನ್ನೂರು, ಆ. 7 – ಇಲ್ಲಿನ ಪುರಸಭೆಯ ಅಧ್ಯಕ್ಷ ಸ್ಥಾನವನ್ನು ಎಸ್ಟಿ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ನಿಗದಿ ಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.

ಆದರೆ ಅಧ್ಯಕ್ಷ ಸ್ಥಾನವನ್ನು ಮೀಸಲಟ್ಟಿರುವ ಎಸ್ಟಿ ಮಹಿಳೆ ಈ ಪುರಸಭೆಯಲ್ಲಿ ಆಯ್ಕೆ ಯಾಗಿಲ್ಲ. ಹಾಗಾಗಿ ಸರ್ಕಾರದ ಈ ತೀರ್ಮಾ ನವನ್ನು ಪ್ರಶ್ನಿಸಿ ಮತ್ತು ಅಧ್ಯಕ್ಷ ಸ್ಥಾನವನ್ನು ಎಸ್ಟಿ ಮಹಿಳೆ ಹೊರತು ಪಡಿಸಿ, ಬೇರೆ ಮೀಸಲಾತಿ ನೀಡುವಂತೆ ಪುರಸಭೆ ಸದಸ್ಯರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಇಲ್ಲಿನ ಪುರಸಭೆಯಲ್ಲಿ ಎಸ್ಟಿ ಸಾಮಾನ್ಯದಿಂದ ಟಿ. ಹನುಮಂತಪ್ಪ ಮಾತ್ರ ಆಯ್ಕೆಯಗಿದ್ದು, ಎಸ್ಟಿ ಮಹಿಳೆಯರೂ ಆಯ್ಕೆಯಾಗಿಲ್ಲ. ಸಾಮಾನ್ಯ ಮಹಿಳಗೆ ಮಿಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ 11 ಜನ ಮಹಿಳೆಯರು ಇದ್ದಾರೆ. ಒಟ್ಟು 23 ಸ್ಥಾನಗಳಲ್ಲಿ 11 ಮಹಿಳೆಯರು, 12 ಪುರುಷರು ಆಯ್ಕೆಯಾಗಿದ್ದಾರೆ. ಪುರಸಭೆಯಲ್ಲಿ ಕಾಂಗ್ರೆಸ್‌ ಬಹುಮತ ಹೊಂದಿದೆ.

ತಿಂಗಳ ಬಳಿಕ ಮೀಸಲಾತಿ : ಮಲೇಬೆನ್ನೂರು ಪುರಸಭೆಗೆ ನೂತನ ಸದಸ್ಯರು 2022ರ ಜನವರಿಯಲ್ಲಿ ಆಯ್ಕೆಯಾಗಿದ್ದರು. ಸತತ 31 ತಿಂಗಳುಗಳ ಬಳಿಕ ಸರ್ಕಾರವು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿದೆ. ಆದರೆ ವಿಪರ್ಯಾಸ ಎಂದರೆ ಅಧ್ಯಕ್ಷ ಸ್ಥಾನಕ್ಕೆ ಮೀಸಲಿಟ್ಟಿರುವ ಮೀಸಲಾತಿಯವರು ಈ ಪುರಸಭೆಯಲ್ಲಿ ಆಯ್ಕೆಯಾಗಿಲ್ಲ.

ಸಂಬಂಧಪಟ್ಟ ಇಲಾಖೆಯು ಇಂತಹ ಸಾಮಾನ್ಯ ಜ್ಞಾನ ಇಲ್ಲದಂತೆ ಮಿಸಲಾತಿ ಪ್ರಕಟಿಸಿರುವುದಕ್ಕೆ ಪಟ್ಟಣದ ಜನತೆ ಬೇಸರ ವ್ಯಕ್ತಪಡಿಸಿದರು.

ಕಳೆದ 31 ತಿಂಗಳಿನಿಂದ ಅಧ್ಯಕ್ಷ-ಉಪಾಧ್ಯಕ್ಷರು ಇಲ್ಲದೇ, ಆಡಳಿತ ಯಂತ್ರ ಕುಸಿದಿದೆ. ಈಗ ಮತ್ತೆ ಇಂತಹ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

error: Content is protected !!