ದಾವಣಗೆರೆ, ಆ. 6 – ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಗಟೇರಿ ಜಿಲ್ಲಾ ಆಸ್ಪತ್ರೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ನಾಡಿದ್ದು ದಿನಾಂಕ 8 ರ ಗುರುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಸ್ಥಳೀಯ ರಾಮನಗರದಲ್ಲಿನ ಗಾಂಧಿ ಭವನದಲ್ಲಿ ವ್ಯಸನ ಮುಕ್ತ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನಿಗಳಿಗೆ ವ್ಯಸನದಿಂದ ಹೊರ ಬರಲು ವೈದ್ಯರು ಮತ್ತು ನುರಿತ ಕೌನ್ಸಿಲರ್‍ಗ ಳಿಂದ ಚಿಕಿತ್ಸೆ ಮತ್ತು ಸಲಹೆಯನ್ನು ನೀಡಲಾಗು ತ್ತದೆ. ವ್ಯಸನಿಗಳ ತೀವ್ರತೆಯನ್ನು ಆಧರಿಸಿ ಚಿಕಿತ್ಸಾ ಸಲಹೆ ನೀಡಲಾ ಗುತ್ತದೆ. ಆಸಕ್ತರು ನಾಡಿದ್ದು ದಿನಾಂಕ 8 ರ ಗುರುವಾರ ಬೆಳಗ್ಗೆ 9.30ಕ್ಕೆ ಗಾಂಧಿ ಭವನಕ್ಕೆ ಆಗಮಿಸಿ, ನೊಂದಣಿ ಮಾಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾ ಖೆಯ ಹಿರಿಯ ಸಹಾಯಕ ನಿರ್ದೇ ಶಕ ಬಿ. ಧನಂಜಯ ತಿಳಿಸಿದ್ದಾರೆ.
January 4, 2025