ದಾವಣಗೆರೆ, ಆ. 5 – ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುವ ಬೀದಿ ಬದಿ ವ್ಯಾಪಾರಿಗಳು ಮತ್ತು ಈ ಹಿಂದೆ ಪಾಲಿಕೆಯಿಂದ ನೋಂದಾಯಿ ಸಲ್ಪಟ್ಟ, ನೋಂದಣಿ ಮಾಡಿಸದೇ ಇರುವ ಬೀದಿ ಬದಿ ವ್ಯಾಪಾರಿಗಳು ನಗರದ ರಸ್ತೆ ಬದಿಗಳಲ್ಲಿ ಪಾದಚಾರಿ ರಸ್ತೆಗಳಲ್ಲಿ ತರಕಾರಿ, ಹಣ್ಣು ಹಂಪಲು, ಹೂವು ಹಾಗೂ ಪೂಜಾ ಸಾಮಗ್ರಿಗಳ ವ್ಯಾಪಾರ ಮಾಡಲು ತಾವು ಬಳಸುವ ತಳ್ಳುವ ಗಾಡಿ, ಪೆಟ್ಟಿಗೆಗಳನ್ನು ವ್ಯಾಪಾರದ ಸ್ಥಳದಲ್ಲಿಯೇ ಶಾಶ್ವತವಾಗಿ ಇಡುತ್ತಿರುವುದ ರಿಂದ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ತಳ್ಳುವ ಗಾಡಿಗಳು, ಮಾರಾಟ ಸಾಮಗ್ರಿಗಳು, ಸಾರ್ವಜನಿಕ ರಸ್ತೆ, ಫುಟ್ ಪಾತ್ ಮೇಲೆ ಕಂಡುಬಂದಲ್ಲಿ ಅವುಗಳನ್ನು ಮತ್ತು ಜಪ್ತಿ ಮಾಡುವ ಜೊತೆಗೆ ದಂಡ ವಿಧಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.
January 10, 2025