ದಾವಣಗೆರೆ, ಆ.5- ಪಿಎಲ್‌ಇ ಟ್ರಸ್ಟ್, ಬಿಜೆಎಂ ಸ್ಕೂಲ್ ಮತ್ತು ಬಿ.ಎನ್.ಬಿ. ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಪದಗ್ರಹಣ ಹಾಗೂ ನಾಗರ ಪಂಚಮಿಯ ಪ್ರಯುಕ್ತ ಕಲ್ಲ ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು ಸಪ್ತಾಹದ ಉದ್ಘಾಟನಾ ಸಮಾರಂಭವು ನಾಡಿದ್ದು ದಿನಾಂಕ 7ರ ಬುಧವಾರ ಬೆಳಿಗ್ಗೆ 11ಕ್ಕೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಹಿಸುವರು. ಜಿ. ಕೊಟ್ರೇಶ್ ಉದ್ಘಾಟಿಸುವರು. ದಿನೇಶ್ ಕೆ.ಶೆಟ್ಟಿ, ಶ್ರೀಮತಿ ವೀಣಾ ಬಕ್ಕೇಶ್, ಎಲ್.ಹೆಚ್. ಸಾಗರ್ ಅವರಿಗೆ ಗೌರವ ಸನ್ಮಾನಿಸಲಾಗುವುದು ಎಂದು ಪಿಎಲ್‌ಇ ಟ್ರಸ್ಟ್ ಕಾರ್ಯದರ್ಶಿ ಕೆ.ಎಸ್. ಮಂಜುನಾಥ್ ಅಗಡಿ ತಿಳಿಸಿದ್ದಾರೆ.
January 10, 2025