ರಾಣೇಬೆನ್ನೂರು, ಆ. 5- ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗಂಗಾಪುರದಲ್ಲಿ ನಡೆದಿದೆ. ಗಂಗಾಪುರ ಗ್ರಾಮದ ಆಕಾಶ್ ಶಿವರಾಜಪ್ಪ ಹಲವಾಗಲು (23)ಆತ್ಮಹತ್ಯೆ ಮಾಡಿಕೊಂಡ ರೈತ. ಈತನ ತಂದೆ ಹೆಸರಿಗೆ ಇರುವ ಜಮೀನಿನ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಅಂದಾಜು ನಾಲ್ಕು ಲಕ್ಷ ರೂ. ಬೆಳೆ ಸಾಲ ಬಾಕಿ ಇರುವುದಾಗಿ ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಈತನಿಗೆ ತಂದೆ-ತಾಯಿ, ಸಹೋದರ ಇದ್ದು, ಕಳೆದ ವರ್ಷ ಸರಿಯಾಗಿ ಮಳೆ ಬಾರದೆ ಬೆಳೆ ಹಾನಿಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ.
February 25, 2025