ಶ್ರೀಶೈಲ ಮಲ್ಲಿಕಾರ್ಜುನ ವಿವಿಧ ನಾಟಕ ಕಲಾವಿದರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಿಂಚನ ಕಲಾ ಬಳಗ ಇವರ ವತಿಯಿಂದ ಇಂದು ಮಧ್ಯಾಹ್ನ 3 ಗಂಟೆಗೆ ಅಂಗವಿಕಲರ ಆಶಾಕಿರಣ ಟ್ರಸ್ಟ್‌ನ ಭಾವೈಕ್ಯತಾ ವಸತಿಯುತ ಶಾಲೆಯ ಸಭಾಂಗಣದಲ್ಲಿ `ಸುಗಮ ಸಂಗೀತ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸಿಂಚನ ಕಲಾ ಬಳಗದ ಅಧ್ಯಕ್ಷೆ ಕಮಲಮ್ಮ ಮತ್ತಿತರರು ಭಾಗವಹಿಸಲಿದ್ದು, ಮಲ್ಲೇಶ್, ಪ್ರೇಮಲತಾ, ಬಿ.ಸುಜಾತ, ಮಹಾಂತೇಶ್, ನೀಲಗುಂದ ಬಸವನ ಗೌಡ್ರು, ವಿ. ಅಣ್ಣಪ್ಪ ಹರಪನಹಳ್ಳಿ, ಡಿ.ಜಿ. ನಾಗರಾಜಪ್ಪ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
January 15, 2025