ಹೊನ್ನಾಳಿ, ಆ.2- ಪಟ್ಟಣದ ಬಾಲ್ರಾಜ್ ಘಾಟ್ ಹತ್ತಿರದ ತುಂಗಭದ್ರಾ ನದಿಯಲ್ಲಿ ಮಂಗಳವಾರ ಮಧ್ಯಾಹ್ನ ನೀರಿನಲ್ಲಿ ತೇಲಿ ಹೋದ ವ್ಯಕ್ತಿ ಬಲ್ಲೇಶ್ವರ ಅವರು, ಗ್ರಾಮದ ನದಿ ದಡದಲ್ಲಿ ಇಂದು ಬೆಳಿಗ್ಗೆ 6 ಗಂಟೆಗೆ ಶವವಾಗಿ ಪತ್ತೆಯಾದ ಘಟನೆ ನಡೆದಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ತಿಳಿಸಿದ್ದಾರೆ. ಮೃತ ವ್ಯಕ್ತಿಯು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕು ನಾಗಮಂಡ ಗ್ರಾಮದ ಶಿವಪ್ಪ ಗೊರಪ್ಪ ಎಂದು ಕುಟುಂಬದ ಮೂಲಗಳು ಸ್ಪಷ್ಟಪಡಿಸಿದ್ದಾರೆ.
ಹೊನ್ನಾಳಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವವನ್ನು ನೀಡಿದ್ದು, ಇಂದು ಸಂಜೆ 4 ಗಂಟೆಗೆ ನಾಗವಂದದಲ್ಲಿ ಶವ ಸಂಸ್ಕಾರವನ್ನು ನಡೆಸಲಾಗಿದೆ.
ಜುಲೈ 31 ರಂದು ನದಿಯಲ್ಲಿ ತೇಲಿ ಹೋದ ವ್ಯಕ್ತಿ ನಾಪತ್ತೆ ಎಂಬುದಾಗಿ ವರದಿ ಮಾಡಲಾಗಿತ್ತು.