ದವನ್ ಮತ್ತು ನೂತನ ಪದವಿ ಪೂರ್ವ ಕಾಲೇಜಿನ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು, ಇಂದು ಸಂಜೆ 4 ಗಂಟೆಗೆ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ. ಸಿದ್ಧಗಂಗಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಜಯಂತ್ ಡಿ.ಎಸ್. ಕಾರ್ಯಕ್ರಮ ಉದ್ಘಾಟಿಸುವರು. ನೂತನ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್. ಪರಶುರಾಮನಗೌಡ ಅಧ್ಯಕ್ಷತೆ ವಹಿಸುವರು. ದವನ್ ಕಾಲೇಜಿನ ವೀರೇಶ್ ಪಟೇಲ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಎಸ್. ಹಾಲಪ್ಪ, ಜಿ.ಎಸ್.ಅಂಜು, ಹರ್ಷರಾಜ್ ಎ. ಗುಜ್ಜರ್, ಶ್ರೀಮತಿ ಎಂ.ಇ. ವಾಣಿ, ಶ್ರೀಮತಿ ಅಶ್ವಿನಿ ಹೆಚ್.ಸಿ., ಶ್ರೀಮತಿ ಸುಮಿತ್ರಾ ಕೆ.ಟಿ. ಉಪಸ್ಥಿತರಿರುವರು.
January 9, 2025