ಆಗಸ್ಟ್-ಸೆಪ್ಟಂಬರ್‌ನಲ್ಲಿ ಉಪ ಚುನಾವಣೆ ಸಾಧ್ಯತೆ ಪ್ರಕ್ರಿಯೆ ಆರಂಭಿಸಿದ ಹಾವೇರಿ ಜಿಲ್ಲಾಡಳಿತ

ರಾಣೇಬೆನ್ನೂರು,ಜು.28-  ಮಾಜಿ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರು ಲೋಕಸಭೆ ಚುನಾವಣೆಯಲ್ಲಿ ಜಯ ಗಳಿಸಿದ್ದು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಶಿಗ್ಗಾಂವ್‌-ಸವಣೂರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಆಗಸ್ಟ್ ಅಥವಾ ಸೆಪ್ಟಂಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆಯನ್ನು  ಮನಗಂಡಿರುವ ಜಿಲ್ಲಾಡಳಿತ,  ಚುನಾವಣೆಯ ಎಲ್ಲ ತಯಾರಿ ನಡೆಸಿದೆ ಎಂದು ಗೊತ್ತಾಗಿದೆ.

ರಾಜ್ಯ ಚುನಾವಣಾ ಆಯೋಗದ ಸೂಚನೆ ಮೇರೆಗೆ  1,18,478 ಪುರುಷ, 1,12,666 ಮಹಿಳಾ, 85 ವರ್ಷ ಮೇಲ್ಪಟ್ಟ 2,828, ಅಂಗವಿಕಲ 5,030 ಹಾಗೂ 18 ರಿಂದ 19 ವರ್ಷದ  6,536 ಸೇರಿದಂತೆ ಒಟ್ಟು 2,31,151 ಮತದಾರರಿದ್ದು, ಪರಿಷ್ಕರಣೆ ನಡೆದಿದೆ.  

ನಂತರ ಈ ಸಂಖ್ಯೆಯಲ್ಲಿ ಸಾವಿರದಷ್ಟು ವ್ಯತ್ಯಾಸ ಕಂಡು ಬರಬಹುದು ಎನ್ನುವ ಲೆಕ್ಕಾಚಾರ  ಅಧಿಕಾರಿಗಳದ್ದಾಗಿದೆ.  ಕ್ಷೇತ್ರದಲ್ಲಿ 241 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ತಲಾ ಎರಡರಂತೆ 482 ಮತಯಂತ್ರಗಳನ್ನು ಹೊಂದಿಸಿಟ್ಟು ಅವುಗಳ ಪರಿಶೀಲನೆ ನಡೆಸಿದೆ.

ರಾಜೀನಾಮೆ ನೀಡಿರುವ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವಿ-ಸವಣೂರು, ಎಚ್.ಡಿ.ಕುಮಾರಸ್ವಾಮಿ ಅವರ ಚನ್ನಪಟ್ಟಣ ಮತ್ತು ಈ. ತುಕಾರಾಮ ಅವರ ಸೊಂಡೂರು  ಈ ಮೂರೂ ಕ್ಷೇತ್ರಗಳಲ್ಲಿ ಏಕಕಾಲದಲ್ಲಿಯೇ ಉಪಚುನಾವಣೆಗಳು ನಡೆಯಲಿದ್ದು, ಚುನಾವಣಾ ಆಯೋಗ ಆಯಾ ಜಿಲ್ಲಾಡಳಿತಕ್ಕೆ ಹಲವು ನಿರ್ದೇಶನಗಳನ್ನು ನೀಡಿದ್ದು, ಅದರನ್ವಯ ಜಿಲ್ಲಾಡಳಿತಗಳು ಪ್ರಕ್ರಿಯೆ ನಡೆಸಿವೆ ಎಂದು ಹೇಳಲಾಗುತ್ತಿದೆ.

error: Content is protected !!