ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಮಲತಾಯಿ ಧೋರಣೆಗೆ ಭಾರತೀಯ ರೈತ ಒಕ್ಕೂಟ ಖಂಡನೆ

ದಾವಣಗೆರೆ, ಜು.28- ಅಪ್ಪರ್ ಭದ್ರಾ ಯೋಜನೆಗೆ ಕಳೆದ ಎರಡು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರವಿದ್ದಾಗ ಕೇಂದ್ರ ಸರ್ಕಾರವು 5300 ಕೋಟಿ ರೂ. ಬಜೆಟ್‌ನಲ್ಲಿ ತೆಗೆದಿದ್ದೇವೆ ಎಂದು ಹೇಳಿತ್ತು. ಆದರೆ, ಅದು  ಈ ಬಾರಿಯ ಬಜೆಟ್‌ನಲ್ಲಿ ಬರಲಿಲ್ಲ. ಕರ್ನಾಟಕದಿಂದ ಆಯ್ಕೆಯಾದ ಹಣಕಾಸು ಸಚಿವರು ಮಲತಾಯಿ ಧೋರಣೆಯನ್ನು ತೋರಿದ್ದಾರೆ.  ಇದರ ಬಗ್ಗೆ ಮಾಜಿ ಸಂಸದರು ಪ್ರಸ್ತಾಪಿಸದಿರುವ ಬಗ್ಗೆ  ಜಿಲ್ಲಾ ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಹೆಚ್.ಆರ್.ಲಿಂಗರಾಜ್ ಆಕ್ಷೇಪಿಸಿದ್ದಾರೆ. ಕೇಂದ್ರ ಸರ್ಕಾರ ಈ ಕೂಡಲೇ ಮರು ಪರಿಶೀಲಿಸಿ, ಕರ್ನಾಟಕದ ರೈತರಿಗೆ ಅನುಕೂಲ ಮಾಡಲಿ ಎಂದು ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ಭದ್ರಾ ಕಾಡಾ ಪ್ರಾಧಿಕಾರದ ಸಭೆಯು ಇಂದು ಬೆಳಿಗ್ಗೆ 11 ಗಂಟೆಗೆ ಮಲವಗೊಪ್ಪದಲ್ಲಿ ಸಚಿವ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಭದ್ರಾ ಬಲ ನಾಲೆಗೆ ಸಭೆಯ ನಂತರ ನೀರು ಬಿಡಬೇಕು ಎಂದು ಆಗ್ರಹಿಸುತ್ತೇವೆ ಹಾಗೂ ಬಲ ನಾಲೆಗೆ ದನಕರುಗಳನ್ನು ಬಿಡದೇ ರೈತರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ದಿನಾಂಕ ಪ್ರಕಟಣೆ : ಭದ್ರೆಗೆ ಬಾಗಿನ ಹಾಗೂ ಗಂಗೆ ಪೂಜೆಯನ್ನು ಅಣೆಕಟ್ಟೆಯ ಒಡಲು ತುಂಬಿದ ಮೇಲೆ ಜಿಲ್ಲಾ ಭಾರತೀಯ ರೈತ ಒಕ್ಕೂಟವು ದಿನಾಂಕ ಪ್ರಕಟಿಸುತ್ತದೆ ಎಂದು ಲಿಂಗರಾಜ್ ತಿಳಿಸಿದ್ದಾರೆ.

error: Content is protected !!