ಕೊಂಡಜ್ಜಿಯಲ್ಲಿ ಇಂದು ಸುಗಮ ಸಂಗೀತ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಹುಜನ ಸಮಾಜ ಸೇವಾ ಸಂಘ, ಇಂದಿರಾಗಾಂಧಿ ವಸತಿ ಶಾಲೆ (ಕೊಂಡಜ್ಜಿ) ಇವರ ಸಹಯೋಗದಲ್ಲಿ  ಇಂದು   ಬೆಳಿಗ್ಗೆ 11 ಗಂಟೆಗೆ   ಕೊಂಡಜ್ಜಿಯಲ್ಲಿ ಸಂಸ್ಕೃತಿ-ಸಂಭ್ರಮದ ಅಂಗವಾಗಿ  ಹೆಗ್ಗೆರೆ ರಂಗಪ್ಪ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.

ನಾಳೆ ಶನಿವಾರ ಬೆಳಗ್ಗೆ 11 ಗಂಟೆಗೆ ಹರಿಹರ ತಾಲ್ಲೂಕಿನ ದೇವರಬೆಳೆಕೆರೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಐರಣಿ ಚಂದ್ರು ಮತ್ತು ತಂಡದವರು ಕಾರ್ಯಕ್ರಮ ನಡೆಸಿಕೊಡುವರು. 

error: Content is protected !!