ದಾವಣಗೆರೆ, ಜು. 24- ಇಲ್ಲಿನ ಭಗತ್ ಸಿಂಗ್ ನಗರದ (ಪೊಲೀಸ್ ಕ್ವಾರ್ಟ್ರಸ್ ಹಿಂಭಾಗ) 2ನೇ ಕ್ರಾಸ್ ನ ಮನೆಯೊಂದರಲ್ಲಿ ಕಳ್ಳತನ ಮಾಡಿರುವ ಕಳ್ಳರು 5.08 ಲಕ್ಷ ರೂ. ಚಿನ್ನ, ಬೆಳ್ಳಿ ಆಭರಣ ಸೇರಿದಂತೆ ವಸ್ತುಗಳನ್ನು, ಆಸ್ತಿ ದಾಖಲೆಗಳನ್ನು ದೋಚಿ ಪರಾರಿ ಯಾಗಿದ್ದಾರೆ. ದಂಪತಿ ಮನೆಗೆ ಬೀಗ ಹಾಕಿಕೊಂಡು ಬೀಗವನ್ನು ಮನೆಯ ಕಿಟಕಿಯಲ್ಲಿ ಇಟ್ಟು ಕೆಲಸಕ್ಕೆ ಹೋಗಿದ್ದಾರೆ. ಸಂಜೆ ಹಿಂದಿರುಗಿ ಬಂದು ಮನೆಯ ಬೀಗ ತೆಗೆದು ನೋಡಿದಾಗ ಬೆಡ್ ರೂಂ ಮಂಚದ ಕೆಳಗಿದ್ದ ಟ್ರಂಕ್ ಕಾಣೆಯಾಗಿರುವುದು ತಿಳಿದಿದೆ.
ಟ್ರಂಕ್ನಲ್ಲಿ ಸುಮಾರು 5,08,100 ರೂ. ಬೆಲೆಯ ಚಿನ್ನ, ಬೆಳ್ಳಿ ಆಭರಣ, ವಸ್ತುಗಳು ಹಾಗೂ ದಾಖಲೆ ಪತ್ರಗಳು ಇದ್ದವೆಂದು ಸಮೀವುಲ್ಲಾ ಅವರು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.