ಬ್ಯಾಡಗಿ, ಜು. 24 – ಫೇಸ್ಬುಕ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಬ್ಯುಸಿನೆಸ್ ಮಾಡುವ ನೆದಲ್ಲಿ ತಾಲ್ಲೂಕಿನ ಮೋಟೆ ಬೆನ್ನೂರು ಯೋಗ ಶಿಕ್ಷಕ ರೊಬ್ಬರಿಗೆ ಬರೋಬ್ಬರಿ 30 ಲಕ್ಷ ರೂ. ವಂಚಿಸಿದ ಕುರಿತು ಇಲ್ಲಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ. ಕ್ಯೂರಿ ಎನ್ನುವ ಯುವತಿ ಸಾಮಾ ಜಿಕ ಜಾಲತಾಣವಾದ ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದಾಳೆ. ಯುಕೆಯಲ್ಲಿರುವ ನಮ್ಮ ಬ್ಯೂರಿಕ್ ಗೋಲ್ಡ್ ಕ್ಯಾಪಿಟಲ್ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಇಬ್ಬರು ಕಂಪನಿಗೆ ಮಾಲೀಕರಾಗಿ ಬಂದ ಲಾಭವನ್ನು ಹಂಚಿಕೊಳ್ಳಬಹುದು ಎಂದು ನಂಬಿಸಿದ್ದಾಳೆ. ನಂತರ ಮುತ್ತಪ್ಪ ಅವರಿಂದ 30 ಲಕ್ಷ ರೂ. ಆಕೆಯ ವಿವಿಧ ಖಾತೆಗಳಿಗೆ ಹಾಕಿಸಿಕೊಂಡು ಮೋಸ ಮಾಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
January 8, 2025