ಶಿವಮೊಗ್ಗ, ಜು.24- ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿರುವುದರಿಂದ ಭದ್ರಾ ಒಳ ಹರಿವು ಇಂದು ಮತ್ತಷ್ಟು ಇಳಿಕೆ ಆಗಿದೆ. ಭದ್ರಾ ಜಲಾಶಯಕ್ಕೆ ನಿನ್ನೆ 20 ಸಾವಿರ ಕ್ಯೂಸೆಕ್ಸ್ ಇದ್ದ ಒಳ ಹರಿವು ಬುಧವಾರ 15,383 ಸಾವಿರ ಕ್ಯೂಸೆಕ್ಸ್ಗೆ ಇಳಿದಿದೆ. ಬುಧವಾರ ಸಂಜೆ ಜಲಾಶಯದ ನೀರಿನ ಮಟ್ಟ 170 ಅಡಿ ಆಗಿದ್ದು ಕಳೆದ ವರ್ಷಕ್ಕಿಂತ 20 ಅಡಿ ನೀರು ಹೆಚ್ಚು ಸಂಗ್ರಹವಾಗಿದೆ. ಕಳೆದ ವರ್ಷ 150 ಅಡಿ ನೀರಿತ್ತು. ಜಲಾಶಯದ ಮಟ್ಟ 186 ಅಡಿಗಳಾಗಿದ್ದು, ಭರ್ತಿಗೆ 16 ಅಡಿ ಬಾಕಿ ಇದೆ.
December 29, 2024