ಮಲೇಬೆನ್ನೂರು, ಜು.23- ಸತತ ಮಳೆಯಿಂದಾಗಿ ಕೊಮಾರನಹಳ್ಳಿ ತಾಂಡದ ಸೀತಾಬಾಯಿ ಈಶ್ವರನಾಯ್ಕ ಅವರ ಇಬ್ಬರು ಮಕ್ಕಳ ವಾಸದ ಮನೆಗಳು ಗೋಡೆ ಕುಸಿದು ಬಿದ್ದಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ. ಈ ವೇಳೆ 2 ಮನೆಗಳಲ್ಲೂ ಒಟ್ಟು 6 ಜನ ಮಲಗಿದ್ದರು ಎನ್ನಲಾಗಿದೆ. ಅದೃಷ್ಠವಶಾತ್ ಘಟನೆಯಲ್ಲಿ ಯಾವ ಜೀವ ಹಾನಿ ಆಗಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲೀಸಿದ ಗ್ರಾಮಲೆಕ್ಕಾಧಿಕಾರಿ ಅಣ್ಣಪ್ಪ, ಗ್ರಾಮದ ಜಿ.ಮಂಜುನಾಥ್ ಪಟೇಲ್, ಮಡಿವಾಳರ ಬಸವರಾಜ್ ತಿಳಿಸಿದ್ದಾರೆ.
January 10, 2025