ಶಿವಮೊಗ್ಗ, ಜು.23- ಮಲೆನಾಡಿನಲ್ಲಿ ಕಳೆದೆರೆಡು ದಿನಗ ಳಿಂದ ಬಿಡುವು ನೀಡಿದ್ದ ಮುಂಗಾರು ಮಳೆ ಆರಂಭವಾಗಿದ್ದು, ತುಂಗಾ ನದಿ ಯಲ್ಲಿ ನೀರಿನ ಹರಿವು ಮಂಗಳ ವಾರ ಮತ್ತೆ ಏರಿಕೆಯಾಗಿದ್ದರೆ, ಭದ್ರಾ ಹರಿವು ಇಳಿಕೆ ಆಗಿದೆ. ಗಾಜನೂರಿನ ತುಂಗಾ ಜಲಾಶಯಕ್ಕೆ ಮಂಗಳವಾರ ಬೆಳಗ್ಗೆ 28 ಸಾವಿರ ಕ್ಯೂಸೆಕ್ಸ್ ಇದ್ದ ಒಳ ಹರಿವು ಸಂಜೆ 38 ಸಾವಿರ ಕ್ಯೂಸೆಕ್ಸ್ಗೆ ಏರಿಕೆ ಕಂಡಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ನದಿ ಯಲ್ಲಿ ನೀರಿನ ಹರಿವು ಮತ್ತೆ ಹೆಚ್ಚಾಗಿದೆ.
ಭದ್ರಾ ಒಳ ಹರಿವು ಇಳಿಕೆ : ಭದ್ರಾ ಜಲಾಶಯಕ್ಕೆ ಸೋಮವಾರ 25 ಸಾವಿರ ಕ್ಯೂಸೆಕ್ಸ್ ಇದ್ದ ಒಳ ಹರಿವು ಸೋಮವಾರ ಮಂಗಳವಾರ 20 ಸಾವಿರ ಕ್ಯೂಸೆಕ್ಸ್ಗೆ ಇಳಿದಿದೆ. ಸೋಮವಾರ ಸಂಜೆ ಜಲಾಶಯದ ನೀರಿನ ಮಟ್ಟ 169 ಅಡಿ ದಾಟಿದ್ದು, ಕಳೆದ ವರ್ಷಕ್ಕಿಂತ 24 ಅಡಿ ನೀರು ಹೆಚ್ಚು ಸಂಗ್ರಹವಾಗಿದೆ. ಕಳೆದ ವರ್ಷ ಈ ದಿನ ಜಲಾಶಯದಲ್ಲಿ 145 ಅಡಿ ನೀರಿತ್ತು. ಜಲಾಶಯದ ಗರಿಷ್ಟ ಮಟ್ಟ 186 ಅಡಿಗಳಾಗಿದ್ದು, ಜಲಾಶಯ ಭರ್ತಿಗೆ 17 ಅಡಿ ಮಾತ್ರ ಬಾಕಿ ಇದೆ.