ದಾವಣಗೆರೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಹಡಪದ ಸಮಾಜ ಇವರ ಸಂಯುಕ್ತಶ್ರಾಯದಲ್ಲಿ ಶ್ರೀ ಹಡಪದ ಅಪ್ಪಣ್ಣ ಜಯಂತಿಯನ್ನು ಇಂದು ಬೆಳಿಗ್ಗೆ 11ಕ್ಕೆ ತುಂಗಭದ್ರಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಸಚಿವ ಶಾಮನೂರು ಮಲ್ಲಿಕಾರ್ಜುನ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದರಾದ ಪ್ರಭಾ ಮಲ್ಲಿಕಾರ್ಜುನ್ ಭಾಗವಹಿಸುವರು.
ಶ್ರೀ ದೇವಯೋಗ ಮಂದಿರ ಝಂಜರವಾಡದ ಶ್ರೀ ಬಸವರಾಜೇಂದ್ರ ಶರಣರಿಂದ ಉಪನ್ಯಾಸ ನಡೆಯಲಿದೆ. ಬಸವಕಲಾ ಲೋಕದಿಂದ ವಚನ, ಸಂಗೀತ, ನಾಡಗೀತೆ ನಡೆಯುವುದು. ಶಾಸಕರುಗಳಾದ ರವಿಕುಮಾರ್ ಎನ್., ಎಸ್.ಎಲ್. ಭೋಜೇಗೌಡ, ಚಿದಾನಂದ ಎಂ. ಗೌಡ, ಡಿ.ಎಸ್. ಅರುಣ್, ಕೆ.ಎಸ್. ನವೀನ್, ಕೆ.ಅಬ್ದುಲ್ ಜಬ್ಬಾರ್, ಕೆ.ಎಸ್. ಬಸವಂತಪ್ಪ, ಬಸವರಾಜು ವಿ.ಶಿವಗಂಗಾ, ಬಿ.ದೇವೇಂದ್ರಪ್ಪ, ಬಿ.ಪಿ. ಹರೀಶ್, ಶಾಂತನಗೌಡ ಡಿ.ಜಿ., ಡಾ. ಧನಂಜಯ್ ಸರ್ಜಿ, ಡಿ.ಟಿ. ಶ್ರೀನಿವಾಸ್, ಮಹಾಪೌರರಾದ ವಿನಾಯಕ್ ಬಿ.ಹೆಚ್., ಉಪಮಹಾಪೌರರಾದ ಯಶೋಧ ಯಗ್ಗಪ್ಪ ಉಪಸ್ಥಿತರಿರುವರು ಎಂದು ಜಿಲ್ಲಾ ಹಡಪದ ಸಮಾಜದ ಅಧ್ಯಕ್ಷ ಶಶಿಧರ್ ಬಸಾಪುರ ತಿಳಿಸಿದ್ದಾರೆ.