ಎಸ್.ಎಸ್. ನಾರಾಯಣ ಸೂಪರ್ ಸ್ಪೆಷಾಲಿಟಿ ಸೆಂಟರ್ ಮತ್ತು ಜಯನಗರ `ಸಿ’ ಬ್ಲಾಕ್ ನಾಗರಿಕ ಹಿತರಕ್ಷಣಾ ಸಮಿತಿ, ಲಯನ್ಸ್ ಕ್ಲಬ್ ಇವರ ಸಹಯೋಗದಲ್ಲಿ ಇಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಉಚಿತ ಹೃದಯ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ.
ಶಕ್ತಿನಗರದ ಭೀಷ್ಮ ವೃತ್ತದಲ್ಲಿನ ಜೀನಿಯಸ್ ಸ್ಕೂಲ್ ಹತ್ತಿರದ ಎಸ್.ಎಂ. ಕಾಂಪ್ಲೆಕ್ಸ್‌ನಲ್ಲಿ ರಕ್ತದೊತ್ತಡ, ಇಸಿಜಿ, ವೈದ್ಯರ ಸಮಾಲೋಚನೆ ನಡೆಸಲಾಗುವುದು. ಕಾರ್ಯ ಕ್ರಮದ ಉದ್ಘಾಟನೆಯನ್ನು ಶ್ರೀಮತಿ ಉಮಾ ಪ್ರಕಾಶ್ ನೆರವೇರಿಸುವರು. ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಿ.ಎನ್. ಬಿಕ್ಕೋಜಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ನಾಗರಿಕ ಹಿತರಕ್ಷಣಾ ಸಮಿತಿಯ ಪಿ.ಅಂಜಿನಪ್ಪ, ಟಿ.ಇ. ರುದ್ರಪ್ಪ, ವೈ. ತಿಪ್ಪೇಸ್ವಾಮಿ ಶೆಟ್ರು, ಡಿ. ರವಿಕುಮಾರ್, ಪಿ.ಎಸ್. ನಾಗರಾಜ್, ಸುರೇಶ್ ಅಡ್ಲಿಗೆರೆ, ನಿಂಗಪ್ಪ ಇಟ್ಟಿಗಿ, ಶಂಕರ್‍ನಾಯ್ಕ ಆಗಮಿಸುವರು.
ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳವಯ್ಯ, ಕಾರ್ಯದರ್ಶಿ ಸಿ. ಅಜಯ್ ನಾರಾಯಣ್, ಖಜಾಂಚಿ ಎಸ್. ನಾಗರಾಜ್, ಸಹ ಕಾರ್ಯದರ್ಶಿ ಹೆಚ್.ಎಂ. ನಾಗರಾಜ್ ಪಾಲ್ಗೊಳ್ಳುವರು.