ದಾವಣಗೆರೆ, ಜು. 22 – ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜಿಲ್ಲೆಯಲ್ಲಿನ ಪಡಿತರ ಚೀಟಿದಾರರಿಗೆ ಜೂನ್ ಮಾಹೆಗೆ ಅನ್ವಯವಾಗುವಂತೆ ಪಡಿತರ ಧಾನ್ಯ ಹಂಚಿಕೆ ಮಾಡಲಾಗಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ ಪ್ರತಿ ಕಾರ್ಡ್‍ಗೆ 21 ಕೆಜಿ ಅಕ್ಕಿ, ರಾಗಿ, ಪ್ರತಿ ಕಾರ್ಡ್‍ಗೆ 14 ಕೆಜಿ, ಆದ್ಯತಾ ಬಿಪಿಎಲ್ ಪಡಿತರ ಚೀಟಿದಾರರಿಗೆ 3 ಕೆಜಿ ಅಕ್ಕಿ, 2 ಕೆಜಿ ರಾಗಿ ಪ್ರತಿ ಸದಸ್ಯರಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಎಪಿಎಲ್ ಸದಸ್ಯರ ಪಡಿತರ ಚೀಟಿಗೆ 5 ಕೆಜಿ ಅಕ್ಕಿ, 2 ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವವರಿಗೆ 10 ಕೆಜಿ ಅಕ್ಕಿಯನ್ನು ಕೆಜಿಗೆ 15 ರೂ. ಗಳ ದರದಲ್ಲಿ ವಿತರಣೆ ಮಾಡಲಾಗುತ್ತದೆ ಎಂದು ಹೊನ್ನಾಳಿ ತಹಶೀಲ್ದಾರ್ ತಿಳಿಸಿದ್ದಾರೆ.
January 8, 2025