ದಾವಣಗೆರೆ, ಜು.21- ರಾಜ್ಯ ಕಾಂಗ್ರೆಸ್ ಸರ್ಕಾರವು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕದಲ್ಲಿ 1400 ರೂ.ಗಳ ಹೆಚ್ಚಳ ಗೊಳಿಸಿರುವುದನ್ನು ಎಐಡಿಎಸ್ಒ ಉಗ್ರವಾಗಿ ಖಂಡಿಸಿದೆ.
ಪ್ರತಿಷ್ಠಿತ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿಇ) ಇಲ್ಲಿ 2000 ರೂ.ಗಳಷ್ಟು ಹೆಚ್ಚಿಸಿದ್ದು, ಸರ್ಕಾರದ ಈ ನಿಲುವಿನಿಂದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಶುಲ್ಕವು 42,000ರೂ.ಗಳಿಗೆ ಏರಿದೆ ಎಂದು ದೂರಿದ್ದಾರೆ.
ರಾಜ್ಯದ ಶಿಕ್ಷಣ ಪ್ರೇಮಿಗಳು ಸಂಘಟಿತರಾಗಿ ವೃತ್ತಿಪರ ಕೋರ್ಸ್ಗಳನ್ನು ಹಣ ಗಳಿಕೆಯ ಅಸ್ತ್ರವಾಗಿ ಬಳಸುವುದರ ವಿರುದ್ಧ ಧ್ವನಿ ಎತ್ತಬೇಕೆಂದು ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಟಿ.ಎಸ್. ಸುಮನ್ ಒತ್ತಾಯಿಸಿದ್ದಾರೆ.
ಬಡ ಜನರ ಹಾಗೂ ದಮನಿತರ ಪರ ಎಂದು ಕರೆಸಿಕೊಳ್ಳುವ ಸರ್ಕಾರವು ಈ ರೀತಿಯ ಶುಲ್ಕ ಏರಿಕೆ ಮಾಡುವುದಿಲ್ಲ. ಸಂಘಟನೆಯ ದೃಷ್ಟಿಯಲ್ಲಿ ಶುಲ್ಕದ ಹೆಚ್ಚಳ ಅಪರಾಧವಾಗಿದ್ದು, ಕೂಡಲೇ ಈ ಸರ್ಕಾರವು ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ.