ರಾಣೇಬೆನ್ನೂರು, ಜು. 21- ತುಮ್ಮಿನಕಟ್ಟಿ ಜಿಪಂ ಕ್ಷೇತ್ರ ವ್ಯಾಪ್ತಿಯ ತುಮ್ಮಿನಕಟ್ಟಿ, ಮಾಳನಾಯ್ಕನಹಳ್ಳಿ, ಲಿಂಗದಹಳ್ಳಿ, ಬಿಲ್ಲಹಳ್ಳಿ, ಮುದೇನೂರು, ಅಂತರವಳ್ಳಿ ಗ್ರಾಪಂಗಳ ಸರ್ಕಾರಿ ಹಾಗೂ ಅನುದಾನಿತ 5 ರಿಂದ 10 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಬ್ಯಾಗ್ ಕೊಡುವುದರೊಂದಿಗೆ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಪರಮೇಶಪ್ಪ ಗೂಳಣ್ಣನವರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಅಲಕ್ಷಿಸಿದ ಹೊಲಕ್ಕೆ ಹೋಗುವ ರಸ್ತೆ ರಿಪೇರಿ, ವಿವಿಧ ಕ್ಷೇತ್ರಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪುರಸ್ಕಾರ, ಕೋವಿಡ್ ಸಂದರ್ಭದಲ್ಲಿ ವಿವಿಧ ಸಾವಿರಾರು ಬಡ ಜನರಿಗೆ ದಿನಸಿ ಕಿಟ್ ವಿತರಣೆ ಹೀಗೆ ಪ್ರತಿ ವರ್ಷ ಸಮಾಜ ಮುಖಿ ಚಿಂತನೆಗಳೊಂದಿಗೆ ಪರಮೇಶಪ್ಪ ಹುಟ್ಟುಹಬ್ಬ ಆಚರಿಸಿ ಕೊಳ್ಳುತ್ತಿದ್ದಾರೆ. ನಾಳೆ ದಿನಾಂಕ 22ರ ಸೋಮವಾರ ಸಿದ್ದೇಶ್ವರ ಸಮುದಾಯ ಭವನದಲ್ಲಿ ತಿಪ್ಪಾಯಿಕೊಪ್ಪದ ಶ್ರೀ ಮಹಾಂತ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಆಚರಿಸು ತ್ತಿರುವ ತಮ್ಮ ಹುಟ್ಟುಹಬ್ಬದಲ್ಲಿ ತಾಲ್ಲೂಕಿನಲ್ಲಿರುವ ಅವಿಭಕ್ತ ಕುಟುಂಬದ ಹಿರಿಯರನ್ನು ಹಾಗೂ ಡಿ ವರ್ಗದ ನೌಕರರನ್ನೂ ಸಹ ಗೌರವಿಸುತ್ತಿದ್ದಾರೆ.
January 11, 2025